ಜಮ್ಮು-ಕಾಶ್ಮೀರದಲ್ಲಿ ಕಳೆದ ವರ್ಷ ವಿಶ್ವದಲ್ಲೇ ಅತಿ ಹೆಚ್ಚು ಇಂಟರ್ನೆಟ್ ಸ್ಥಗಿತ: ಸಂಶೋಧನೆಯಲ್ಲಿ ಬಹಿರಂಗ

Update: 2023-01-19 10:05 GMT

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ  ಕಳೆದ ವರ್ಷ 24 ಬಾರಿ ಇಂಟರ್ನೆಟ್ ಸ್ಥಗಿತಗೊಳಿಸಲಾಗಿತ್ತು. ಇದು ವಿಶ್ವದ ಒಂದೇ ಪ್ರದೇಶದಲ್ಲಿ ಅತಿ ಹೆಚ್ಚು ಎನ್ನುವುದಾಗಿ  ವರ್ಚುವಲ್ ಖಾಸಗಿ ನೆಟ್‌ವರ್ಕ್ ಪೂರೈಕೆದಾರ ಸರ್ಫ್‌ಶಾರ್ಕ್ ನಡೆಸಿದ ಸಂಶೋಧನೆಯಲ್ಲಿ ಕಂಡುಬಂದಿದೆ.

2022 ರಲ್ಲಿ, ಭಾರತೀಯ ಅಧಿಕಾರಿಗಳು ಜಮ್ಮು-ಕಾಶ್ಮೀರದಲ್ಲಿ 24 ಸಂದರ್ಭಗಳಲ್ಲಿ ಇಂಟರ್ನೆಟ್ ಅನ್ನು ಸೆನ್ಸಾರ್ ಮಾಡಿದ್ದಾರೆ, ಆದರೆ ಅಂತಹ ಕ್ರಮಗಳನ್ನು ದೇಶದ ಇತರ ಭಾಗಗಳಲ್ಲಿ ಕೇವಲ 10 ಬಾರಿ ಕೈಗೊಳ್ಳಲಾಗಿದೆ  ಎಂದು ಕಂಪನಿ ಹೇಳಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಇಂಟರ್ನೆಟ್ ಸ್ಥಗಿತಗೊಳ್ಳುವುದು ಸಾಮಾನ್ಯ ಘಟನೆಯಾಗಿದೆ, ಇದು  ಮುನ್ನೆಚ್ಚರಿಕೆ ಕ್ರಮ ಎಂದು ಅಧಿಕಾರಿಗಳು ಸಮರ್ಥನೆ ಮಾಡುತ್ತಾರೆ.

ಜಮ್ಮು-ಕಾಶ್ಮೀರದ ಹಿಂದಿನ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿರುವ  ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ 2019 ರಿಂದ ಜಮ್ಮು-ಕಾಶ್ಮೀರದ  ಜನತೆ "ಅಭೂತಪೂರ್ವ ಇಂಟರ್ನೆಟ್ ನಿರ್ಬಂಧಗಳನ್ನು" ಎದುರಿಸುತ್ತಿದ್ದಾರೆ ಎಂದು ಸರ್ಫ್‌ಶಾರ್ಕ್ ಹೇಳಿದೆ

Similar News