ಮಲೇಷ್ಯಾದಲ್ಲಿ ಚಿತ್ರೀಕರಣ ವೇಳೆ ಅವಘಡ; ತಮಿಳು ನಟ ವಿಜಯ್‌ ಆ್ಯಂಟನಿಗೆ ಗಾಯ

Update: 2023-01-19 12:50 GMT

ಚೆನ್ನೈ: 'ಪಿಚ್ಚೈಕಾರನ್‌', 'ನಾನ್‌', 'ಸಲೀಂ' ಮೊದಲಾದ ಚಿತ್ರಗಳ ಮೂಲಕ  ಗಮನ ಸೆಳೆದಿದ್ದ ತಮಿಳು ನಟ ವಿಜಯ್ ಆ್ಯಂಟನಿ (Vijay Antony) ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಮಲೇಷ್ಯಾದಲ್ಲಿ ʼಪಿಚ್ಚೈಕಾರನ್‌-2' ಚಿತ್ರೀಕರಣ ನಡೆಯುತ್ತಿದ್ದಾಗ ಅವಘಡ ಸಂಭವಿಸಿದೆ.

ವಿಜಯ್ ಆ್ಯಂಟನಿ ಅವರ ಬೋಟ್ ವೇಗವಾಗಿ ಬಂದು ಎದುರಿನ ದೋಣಿಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.

ವಿಜಯ್ ಆ್ಯಂಟನಿ ಸೊಂಟಕ್ಕೆ ಲಘು ಪೆಟ್ಟು ಬಿದ್ದಿದೆ. ಆತಂಕ ಪಡುವ ಅಗತ್ಯವಿಲ್ಲ, ವಿಜಯ್ ಆ್ಯಂಟನಿ ಚೆನ್ನೈ ತಲುಪಿದ್ದಾರೆ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ. ಶೀಘ್ರದಲ್ಲೇ ಚೇತರಿಸಿಕೊಂಡು ಸಿನಿಮಾ ಕೆಲಸದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ಹೇಳಿವೆ.

Similar News