ಸೌಹಾರ್ದ ಪಂದ್ಯ: ರೊನಾಲ್ಡೊ ಅವಳಿ ಗೋಲು ಗಳಿಸಿದರೂ ಮೆಸ್ಸಿ ನೇತೃತ್ವದ ಪಿಎಸ್ ಜಿ ತಂಡಕ್ಕೆ ಜಯ

Update: 2023-01-20 14:38 GMT

ರಿಯಾದ್: ಸೌಹಾರ್ದ ಪಂದ್ಯದಲ್ಲಿ 10 ಆಟಗಾರರನ್ನು ಒಳಗೊಂಡ ಲಿಯೊನೆಲ್ ಮೆಸ್ಸಿ ನೇತೃತ್ವದ  ಪ್ಯಾರಿಸ್ ಸೇಂಟ್-ಜರ್ಮೈನ್ (PSG) ತಂಡ ಕ್ರಿಸ್ಟಿಯಾನೊ ರೊನಾಲ್ಡೊ ನೇತೃತ್ವದ ಸೌದಿ ಆಲ್-ಸ್ಟಾರ್ ಇಲೆವೆನ್  ತಂಡವನ್ನು 5-4 ರಿಂದ ಸೋಲಿಸಿತು,

ಗುರುವಾರ ನಡೆದ ಪಂದ್ಯದಲ್ಲಿ ಸೌದಿ ಆಲ್-ಸ್ಟಾರ್ ಇಲೆವೆನ್ ತಂಡಕ್ಕಾಗಿ ಮೊದಲಾರ್ಧದಲ್ಲಿ 34ನೇ ಹಾಗೂ 45ನೇ ನಿಮಿಷದಲ್ಲಿ  ಅವಳಿ ಗೋಲು ಗಳಿಸಿದ ರೊನಾಲ್ಡೊ  ಎಲ್ಲರ ಮನ ಗೆದ್ದರು.   

ಜಾಂಗ್(56ನೇ ನಿಮಿಷ),  ಟಲಿಸ್ಕಾ(90_4) ತಲಾ ಒಂದು ಗೋಲು ಗಳಿಸಿದರು. ಪಿಎಸ್ ಜಿ ಪರ ಮೆಸ್ಸಿ 3ನೇ ನಿಮಿಷ, ಮಾರ್ಕ್ವಿನೋಸ್ (43 ನೇ ನಿ. ), ರಾಮೋಸ್ (53ನೇ ನಿ.), ಎಂಬಾಪೆ (60ನೇ ನಿ.), ಎಕಿಟೈಕ್  (78ನೇ )ತಲಾ ಒಂದು ಗೋಲು ಗಳಿಸಿದರು.

200 ಮಿಲಿಯನ್ ಯೂರೋಗಳಿಗೂ ಹೆಚ್ಚು ಮೊತ್ತಕ್ಕೆ ಸಹಿ ಹಾಕಿದ ನಂತರ ರವಿವಾರ ಅಲ್ ನಸ್ರ್‌ಗಾಗಿ ಸೌದಿ ಪ್ರೊ ಲೀಗ್‌ಗೆ ಪಾದಾರ್ಪಣೆ ಮಾಡಲಿರುವ 37 ವರ್ಷದ ರೊನಾಲ್ಡೊ, ಎರಡು ಗೋಲು ಸೌದಿ ಇಲೆವೆನ್ ಗೆಲುವಿಗೆ ಸಾಕಾಗಲಿಲ್ಲ.

Similar News