ಪ್ರಣಯ್, ರಾಧಿಕಾ ರಾಯ್ ವಿರುದ್ಧ ಲುಕೌಟ್ ನೋಟಿಸ್: ಸಿಬಿಐಯನ್ನು ಪ್ರಶ್ನಿಸಿದ ದಿಲ್ಲಿ ನ್ಯಾಯಾಲಯ

Update: 2023-01-20 16:54 GMT

ಮುಂಬೈ, ಜ. 20: ಪತ್ರಕರ್ತರಾದ ಪ್ರಣಯ್ ರಾಯ್(Pranay Roy) ಹಾಗೂ ರಾಧಿಕಾ ರಾಯ್(Radhika Roy) ಅವರ ವಿರುದ್ಧ 2017 ಜೂನ್ 2 ಹಾಗೂ 2019 ಆಗಸ್ಟ್ 19ರಂದು ದಾಖಲಿಸಲಾದ ಎಫ್ಐಆರ್ (FIR) ಹಿನ್ನೆಲೆಯಲ್ಲಿ 2019ರಲ್ಲಿ ಜಾರಿಗೊಳಿಸಲಾದ ಲುಕೌಟ್ ನೋಟಿಸ್ ಬಗ್ಗೆ ದಿಲ್ಲಿ ಉಚ್ಚ ನ್ಯಾಯಾಲಯ ಶುಕ್ರವಾರ ಸಿಬಿಐಯನ್ನು ಪ್ರಶ್ನಿಸಿದೆ.

ಲುಕೌಟ್ ನೋಟಿಸ್ ಈಗಲೂ ಮುಂದುವರಿದಿದೆ. ಈ ಹಿಂದಿನ 2020 ಜೂನ್ 19ರ ಲುಕೌಟ್ ನೋಟಿಸ್  ಅವಧಿ ಮುಗಿದಿದೆ. ಅನಂತರ ಎರಡನೇ ಲುಕೌಟ್ ನೋಟಿಸ್ ಅವಧಿ ಆರಂಭವಾಗಿದೆ ಎಂದು ಸಿಬಿಐ ಪರ ಹಾಜರಾಗಿದ್ದ ವಕೀಲ ನ್ಯಾಯಾಲಯಕ್ಕೆ ತಿಳಿಸಿದರು. ಇದಕ್ಕೆ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪ್ರತಿಭಾ ಎಂ. ಸಿಂಗ್, ನೀವು ಇದನ್ನು ನಿರಂತರವಾಗಿ ಮುಂದುವರಿಸಲು ಸಾಧ್ಯವಿಲ್ಲ ಹಾಗೂ ವಿಚಾರಣೆಯನ್ನು ಎಪ್ರಿಲ್ 28ಕ್ಕೆ ಮುಂದೂಡಿದರು.

Similar News