ಸುದ್ದಿ ಪ್ರಸಾರಕ್ಕಾಗಿ ತಂತ್ರಜ್ಞಾನ ಕಂಪೆನಿಗಳು ಭಾರತೀಯ ಮಾಧ್ಯಮಗಳಿಗೆ ಹಣ ಪಾವತಿಸಬೇಕು: ಕೇಂದ್ರ ಸರಕಾರ ಪ್ರತಿಪಾದನೆ

Update: 2023-01-21 14:45 GMT

ಹೊಸದಿಲ್ಲಿ,ಜ.21: ಸಾಮಾಜಿಕ ಮಾಧ್ಯಮಗಳಲ್ಲಿ ಉತ್ಪನ್ನಗಳು ಮತ್ತು ಸೇವೆಗಳ ಬಗ್ಗೆ ಪ್ರಚಾರ ಮಾಡುವ ಸೆಲೆಬ್ರಿಟಿಗಳು ಮತ್ತು ಪ್ರಭಾವಿಗಳಿಗಾಗಿ ಹೊಸ ಮಾರ್ಗಸೂಚಿಗಳನ್ನು ಕೇಂದ್ರ ಸರಕಾರವು ಹೊರಡಿಸಿದೆ. ಗ್ರಾಹಕರ ಹಿತಾಸಕ್ತಿಗಳ ರಕ್ಷಣೆ ಮತ್ತು ದಾರಿ ತಪ್ಪಿಸುವ ಜಾಹೀರಾತುಗಳಿಗೆ ಕಡಿವಾಣ ಹಾಕುವುದು ಈ ಮಾರ್ಗಸೂಚಿಗಳ ಗುರಿಯಾಗಿದೆ.

ಫೇಸ್ಬುಕ್, ಇನ್ಸ್ಟಾಗ್ರಾಮ್ ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಯುಟ್ಯೂಬ್ ನಲ್ಲಿ ಪ್ರಭಾವಿಗಳು ವಿವಿಧ ಉತ್ಪನ್ನಗಳು ಮತ್ತು ಸೇವೆಗಳ ಬಗ್ಗೆ ತಮ್ಮ ಫಾಲೋವರ್ಗಳ ಮೇಲೆ ಪ್ರಭಾವವನ್ನು ಬೀರುತ್ತಾರೆ ಮತ್ತು ಇದಕ್ಕೆ ಪ್ರತಿಫಲವಾಗಿ ವಿವಿಧ ಬ್ರಾಂಡ್ ಗಳಿಂದ ಲಾಭಗಳನ್ನು ಪಡೆದುಕೊಳ್ಳುತ್ತಾರೆ.

ನೂತನ ಮಾರ್ಗಸೂಚಿಗಳು ಸಾಮಾಜಿಕ ಮಾಧ್ಯಮ ಪ್ರಭಾವಿಗಳು ಇಂತಹ ಪ್ರಚಾರದಿಂದ ಉಡುಗೊರೆಗಳು, ಹೋಟೆಲ್ ವಸತಿ ಸೌಲಭ್ಯಗಳು, ಈಕ್ವಿಟಿ, ರಿಯಾಯಿತಿಗಳು ಮತ್ತು ಪುರಸ್ಕಾರಗಳು ಸೇರಿದಂತೆ ತಮಗೆ ಸಿಗುವ ವಸ್ತುರೂಪದ ಲಾಭಗಳು ಮತ್ತು ಪ್ರಯೋಜನಗಳನ್ನು ಜನತೆಗೆ ಬಹಿರಂಗಗೊಳಿಸುವುದನ್ನು ಕಡ್ಡಾಯಗೊಳಿಸಿವೆ.

ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ ಕುಮಾರ ಸಿಂಗ್ ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ನೂತನ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದರು.

ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (CCPA)ವು ಈ ಮಾರ್ಗಸೂಚಿಗಳನ್ನು ಅನುಸರಿಸದ ತಯಾರಕರು, ಜಾಹೀರಾತುದಾರರು ಮತ್ತು ಉತ್ಪನ್ನ/ಸೇವೆಗಳನ್ನು ಪ್ರಚಾರ ಮಾಡುವ ಸಾಮಾಜಿಕ ಮಾಧ್ಯಮ ಪ್ರಭಾವಿಗಳಿಗೆ 10 ಲ.ರೂ.ವರೆಗೆ ದಂಡವನ್ನು ವಿಧಿಸುವ ಅಧಿಕಾರವನ್ನು ಹೊಂದಿದೆ. ಉಲ್ಲಂಘನೆಯನ್ನು ಪುನರಾವರ್ತಿಸುವವರಿಗೆ 50 ಲ.ರೂ.ವರೆಗೆ ದಂಡವನ್ನು ವಿಧಿಸಲಾಗುವುದು.

ಸಿಸಿಪಿಎ ದಾರಿ ತಪ್ಪಿಸುವ ಜಾಹೀರಾತುಗಳಲ್ಲಿ ತೊಡಗಿಕೊಳ್ಳುವ ಪ್ರಭಾವಿಗಳು ಒಂದು ವರ್ಷದವರೆಗೆ ಯಾವುದೇ ಸೇವೆ/ಉತ್ಪನ್ನವನ್ನು ಪ್ರಚಾರಗೊಳಿಸುವುದನ್ನು ನಿಷೇಧಿಸಬಹುದು ಮತ್ತು ನಂತರದ ಉಲ್ಲಂಘನೆಗಳಿಗಾಗಿ ನಿಷೇಧವು ಮೂರು ವರ್ಷಗಳವರೆಗೆ ವಿಸ್ತರಣೆಗೊಳ್ಳಬಹುದು. ಭಾರತದಲ್ಲಿ ಪ್ರಸ್ತುತ ಸಾಮಾಜಿಕ ಪ್ರಭಾವಿ ಮಾರುಕಟ್ಟೆಯ ಗಾತ್ರವು 1,275 ಕೋ.ರೂ.ಗಳಾಗಿದ್ದು,2025ರ ವೇಳೆಗೆ 2,800 ಕೋ.ರೂ.ಗಳಿಗೆ ಬೆಳೆಯುವ ನಿರೀಕ್ಷೆಯಿದೆ.

ವೀಕ್ಷಕರನ್ನು ತಲುಪಬಲ್ಲ ವ್ಯಕ್ತಿಗಳು/ಗುಂಪುಗಳು ಮತ್ತು ತಮ್ಮ ವೀಕ್ಷಕರು/ಫಾಲೋವರ್ಗಳ ಖರೀದಿ ನಿರ್ಧಾರಗಳ ಮೇಲೆ ಅಥವಾ ಉತ್ಪನ್ನ,ಸೇವೆ,ಬ್ರಾಂಡ್ ಗಳ ಕುರಿತು ಅಭಿಪ್ರಾಯಗಳು ಅಥವಾ ಅನುಭವದ ಮೇಲೆ ಪ್ರಭಾವ ಬೀರಬಲ್ಲವರು ತಮಗೆ ದೊರೆಯುವ ಲಾಭಗಳು ಮತ್ತು ಪ್ರಯೋಜನಗಳನ್ನು ಬಹಿರಂಗಗೊಳಿಸಬೇಕಾಗುತ್ತದೆ. ಮಾರ್ಗಸೂಚಿಗಳ ಪ್ರಕಾರ ಬಹಿರಂಗಗೊಳಿಸುವಿಕೆಯು ಸರಳ ಮತ್ತು ನೇರವಾದ ಭಾಷೆಯಲ್ಲಿರಬೇಕು,ಸ್ಪಷ್ಟವಾಗಿ ಗಮನಕ್ಕೆ ಬರುವಂತಿರಬೇಕು ಮತ್ತು ಲಿಂಕ್ ಗಳು ಅಥವಾ ಹ್ಯಾಷ್ಟ್ಯಾಗ್ ಗಳ ಗುಂಪಿನೊಂದಿಗೆ ಸೇರಿಕೊಂಡಿರಬಾರದು.

ಫೋಟೊಗಳನ್ನು ಪೋಸ್ಟ್ ಮಾಡಿದಾಗ ಬಹಿರಂಗಗೊಳಿಸುವಿಕೆಯನ್ನು ಫೋಟೊದ ಮೇಲೆ ಸೂಪರ್ ಇಂಪೋಸ್ ಮಾಡಬೇಕು ಮತ್ತು ವೀಕ್ಷಕರು ಅದನ್ನು ಗಮನಿಸುವಷ್ಟು ಸ್ಪಷ್ಟವಾಗಿರಬೇಕು.

ವೀಡಿಯೋ ಸಂದರ್ಭದಲ್ಲಿ ಬಹಿರಂಗಗೊಳಿಸುವಿಕೆಗಳನ್ನು ವೀಡಿಯೊದ ಮಧ್ಯದಲ್ಲಿರಿಸಬೇಕು, ಅದು ಪೋಸ್ಟ್ ನ ಕೆಳಗಿರಬಾರದು. ಲೈವ್‌ ಸ್ಟ್ರೀಮ್‌ ಗಳಲ್ಲಿ ಇಂತಹ ಬಹಿರಂಗಗೊಳಿಸುವಿಕೆಗಳನ್ನು ಸ್ಟ್ರೀಮ್ ನ ಉದ್ದಕ್ಕೂ ನಿರಂತರವಾಗಿ ಮತ್ತು ಪ್ರಮುಖವಾಗಿ ಪ್ರದರ್ಶಿಸಬೇಕು ಎಂದು ನೂತನ ಮಾರ್ಗಸೂಚಿಗಳು ಸ್ಪಷ್ಟಪಡಿಸಿವೆ.

Similar News