ಫುಲೆ ದಂಪತಿ ಕುರಿತ ಸಾಕ್ಷಚಿತ್ರ ವರ್ಷಾಂತ್ಯದಲ್ಲಿ ತೆರೆಗೆ

Update: 2023-01-22 07:40 GMT

ಭಗತ್ ಸಿಂಗ್, ಬೋಸ್, ಬಿ.ಆರ್.ಅಂಬೇಡ್ಕರ್ ಮತ್ತು ಗಾಂಧಿ ನಂತರ ಆದರ್ಶ ದಂಪತಿಗಳಾದ ಜ್ಯೋತಿರಾವ್ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಬಾಲಿವುಡ್‌ನ ಬಯೊಪಿಕ್ಸ್ ಹಾಲ್ ಆಫ್ ಫೇಮ್‌ಗೆ ಸೇರ್ಪಡೆಗೊಂಡಿದ್ದಾರೆ. ಸಮಾಜ ಸುಧಾರಕ ಫುಲೆ ದಂಪತಿಯ ಸುತ್ತಲಿನ ತನ್ನ ಇರಿಸುಮುರಿಸಿನಿಂದ ಕಳಚಿಕೊಳ್ಳಲು ಹಿಂದಿ ಚಿತ್ರೋದ್ಯಮಕ್ಕೆ ಒಂದು ಶತಮಾನವೇ ಬೇಕಾಯಿತು. ಅನಂತ ನಾರಾಯಣ ಮಹದೇವನ್ ನಿರ್ದೇಶನದ ಫುಲೆ ದಂಪತಿ ಕುರಿತ ಸಾಕ್ಷಚಿತ್ರ 'ಫುಲೆ' ಕಳೆದ ವರ್ಷದ ಎಪ್ರಿಲ್‌ನಲ್ಲಿ ಸೆಟ್ಟೇರಿದ್ದು, 2023ರ ಅಂತ್ಯದ ವೇಳೆಗೆ ಬಿಡುಗಡೆಗೊಳ್ಳುವ ನಿರೀಕ್ಷೆಯಿದೆ. ಪ್ರತೀಕ್ ಗಾಂಧಿ ಮತ್ತು ಪತ್ರಲೇಖಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಪೋಸ್ಟರ್ ಕಳೆದ ವಾರವಷ್ಟೇ ಬಿಡುಗಡೆಗೊಂಡಿದೆ.

ಆರಂಭದ ಚರಿತ್ರೆಯ ಪಠ್ಯಪುಸ್ತಕಗಳಲ್ಲಿ ಬದಿಗೊತ್ತಲ್ಪಟ್ಟಿದ್ದ ಫುಲೆ ದಂಪತಿಯ ಹೆಸರು ಮತ್ತು ಸಮಾಜಕ್ಕೆ ಅವರ ಕೊಡುಗೆಗಳು ಹೊಸ ಯುಗದ ಡಿಜಿಟಲ್ ದಲಿತರ ಆಗಮನದ ನಂತರ ಮತ್ತು ಕಳೆದ ದಶಕದಲ್ಲಿ ದಲಿತ ರಾಜಕೀಯವನ್ನು ಮುಖ್ಯವಾಗಿಟ್ಟುಕೊಂಡ ಭಾಷಣಗಳ ಬಳಿಕ ಕೋಟ್ಯಂತರ ಜನರ ಗಮನವನ್ನು ಸೆಳೆದಿವೆ. ಆದರೂ ಫುಲೆ ದಂಪತಿ ಹಿಂದಿ ಚಿತ್ರೋದ್ಯಮದ ಲ್ಯಾಂಡ್‌ಸ್ಕೇಪ್‌ನಿಂದ ಕಾಣೆಯಾಗಿದ್ದರು.
ಮರಾಠಿ ಚಿತ್ರರಂಗದ ಹೆಜ್ಜೆಗಳನ್ನು ಅನುಸರಿಸಿ ಬಾಲಿವುಡ್ ಈಗ ಮಹಾರಾಷ್ಟ್ರದ ಈ ಸಾಮಾಜಿಕ ಸುಧಾರಕ ದಂಪತಿಯನ್ನು ಅಪ್ಪಿಕೊಳ್ಳಲು ಮುಂದಾಗಿದೆ.

ಫುಲೆ ದಂಪತಿ ಕುರಿತು ಅಧ್ಯಯನ ನಡೆಸಿರುವ ಬಹಳಷ್ಟು ಇತಿಹಾಸ ಕಾರರು ಹೇಳುವಂತೆ ಅವರ ಕಾರ್ಯಗಳು ಕ್ರಾಂತಿಕಾರಿ ಯಾಗಿದ್ದವು, ಹೀಗಾಗಿ ಉದ್ದೇಶಪೂರ್ವಕವಾಗಿ ಅವುಗಳನ್ನು ಕಡೆಗಣಿಸಲಾಗಿತ್ತು. ಫುಲೆ ದಂಪತಿ ಜಾತಿ ಮತ್ತು ಲಿಂಗ ತಾರತಮ್ಯದ ವಿರುದ್ಧ ಹೋರಾಡಿದ್ದರು, ವ್ಯಂಗ್ಯವೆಂದರೆ ಅವು ಈಗಲೂ ಅಸ್ತಿತ್ವದಲ್ಲಿವೆ ಎಂದು ಠಿಛಿಟ್ಟಜ್ಞಿಠಿ.ಜ್ಞಿ ಜೊತೆ ಮಾತನಾಡಿದ ಮಹಾದೇವನ್ ಹೇಳಿದರು.

ಫುಲೆ ದಂಪತಿ ರಕ್ತಪಾತವಿಲ್ಲದೆ ಸಾಧಿಸಿದ್ದ ಸಾಮಾಜಿಕ ಕ್ರಾಂತಿಯು ಹೊಸ ಅಲೆಗಳನ್ನು ಎಬ್ಬಿಸಿತ್ತು ಮತ್ತು ಅದು ಈಗಲೂ ಮುಂದುವರಿದಿದೆ. ದಂಪತಿಯ ಕುರಿತು ಚಿತ್ರ ನಿರ್ಮಿಸಲು ಯಾರೂ ಬಯಸದ್ದಕ್ಕೆ ಕಾರಣಗಳಲ್ಲಿ ಇದು ಒಂದಾಗಿತ್ತು ಎಂದರು.

ಆದರೂ ಬಯೊಪಿಕ್‌ವೊಂದರ ನಿರ್ಮಾಣವು ತನ್ನದೇ ಆದ ಸವಾಲುಗಳನ್ನು ಹೊಂದಿದೆ. ಸಾಮಾನ್ಯವಾಗಿ ಪಾತ್ರಗಳನ್ನು ಮುಖ್ಯವಾಹಿನಿ ಸಿನಿಮಾಗಳ ಅಗತ್ಯಗಳು ಮತ್ತು ಬೇಡಿಕೆಗಳಂತೆ ರೂಪಿಸಲಾಗುತ್ತದೆ. ಫಲಿತಾಂಶವಾಗಿ ಬಾಲಿವುಡ್‌ನ ಹೆಚ್ಚಿನ ಪ್ರವೃತ್ತಿಗಳಂತೆ ಯಶಸ್ಸಿನ ಸೂತ್ರವು ದುರುಪಯೋಗಗೊಳ್ಳುತ್ತದೆ ಮತ್ತು ಅತಿಯಾಗಿ ಬಳಕೆಯಾಗುತ್ತದೆ. ಮಹಿಳಾ ಶಿಕ್ಷಣವನ್ನು ಉತ್ತೇಜಿಸುವ ಮತ್ತು ಜಾತಿ ಹಾಗೂ ಲಿಂಗ ತಾರತಮ್ಯದ ನಿರ್ಮೂಲನದ ನಿಟ್ಟಿನಲ್ಲಿ ಸಂಪ್ರದಾಯಗಳನ್ನು ಮುರಿದಿದ್ದ ಸಾಮಾಜಿಕ ಕ್ರಾಂತಿಯನ್ನು ಫುಲೆ ದಂಪತಿ ಮುನ್ನಡೆಸಿದ್ದರು. ಬ್ರಿಟಿಷ್ ಸಾಮ್ರಾಜ್ಯಶಾಹಿಯ ಕಾಲದಲ್ಲಿ ಈ ಇಬ್ಬರು ಸಮಾಜ ಸುಧಾರಕರು 1848ರಲ್ಲಿ ಪುಣೆಯಲ್ಲಿ ಭಾರತದ ಮೊದಲ ಬಾಲಕಿಯರ ಶಾಲೆಯನ್ನು ಸ್ಥಾಪಿಸಿದ್ದರು.

ಫುಲೆ ದಂಪತಿಯ ಕಣ್ಮರೆಯ ಬಳಿಕ ನೂರು ವರ್ಷಗಳಿಗೂ ಹೆಚ್ಚಿನ ಅವಧಿಯಲ್ಲಿ ಹಲವಾರು ಚಿತ್ರ ನಿರ್ಮಾಪಕರು, ಮುಖ್ಯವಾಗಿ ಮರಾಠಿಗರು ಈ ಅಪ್ರತಿಮ ಕ್ರಾಂತಿಕಾರಿಗಳನ್ನು ಚಲನಚಿತ್ರಗಳು, ನಾಟಕಗಳು, ಪುಸ್ತಕಗಳು ಅಥವಾ ಟಿವಿ ಕಾರ್ಯಕ್ರಮಗಳ ಮೂಲಕ ಜೀವಂತವಾಗಿರಿಸಿದ್ದಾರೆ. ಫುಲೆಯವರ ಕುರಿತು ಸುಮಾರು 18 ತಿಂಗಳುಗಳ ಕಾಲ ನಡೆಸಿದ ಅಧ್ಯಯನಕ್ಕೂ ಮಹಾದೇವನ್ ಹಿಂದಿ ಮತ್ತು ಇಂಗ್ಲಿಷ್ ಪ್ರಕಟಣೆಗಳ ಕೊರತೆಯಿಂದಾಗಿ ಮರಾಠಿ ಸಾಹಿತ್ಯವನ್ನೇ ಅವಲಂಬಿಸಿದ್ದರು.

ಸಮಾಜ ಸುಧಾರಕರ ಕುರಿತು ಚಿತ್ರಗಳಲ್ಲಿ ಆಚಾರ್ಯ ಪಿ.ಕೆ.ಅತ್ರೆಯವರ ನಿರ್ಮಾಣದ 'ಮಹಾತ್ಮಾ ಫುಲೆ'(1945) ಐತಿಹಾಸಿಕ ಮೈಲಿಗಲ್ಲನ್ನು ಸೃಷ್ಟಿಸಿತ್ತು. ಆರೋಗ್ಯ ಹದಗೆಟ್ಟಿದ್ದರೂ ಡಾ.ಬಿ.ಆರ್.ಅಂಬೇಡ್ಕರ್ ಅವರು ಚಿತ್ರದ ಮೊದಲ ಪ್ರದರ್ಶನಕ್ಕೆ ಹಾಜರಾಗಿದ್ದರು. 1955ರಲ್ಲಿ ಎರಡನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಮರಾಠಿಯಲ್ಲಿ ಅತ್ಯುತ್ತಮ ಚಲನಚಿತ್ರಕ್ಕಾಗಿ ಮೊದಲ ರಾಷ್ಟ್ರಪತಿಗಳ ರಜತ ಪದಕವನ್ನು ಚಿತ್ರವು ಗೆದ್ದುಕೊಂಡಿತ್ತು.
ಮಹಾದೇವನ್ ಅವರ 'ಫುಲೆ' ಚಿತ್ರವು ಹಿಂದಿ ಚಿತ್ರೋದ್ಯಮದಲ್ಲಿಯ ಶೂನ್ಯವನ್ನು ತುಂಬುವ ಜೊತೆಗೆ 1860ರ ದಶಕದಲ್ಲಿ ಆರಂಭಗೊಂಡು ಇಂದಿಗೂ ಪ್ರಸ್ತುತವಾಗಿರುವ ಸಾಮಾಜಿಕ ಕ್ರಾಂತಿಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶವನ್ನು ಹೊಂದಿದೆ.

ಅಮೆರಿಕ ಅಥವಾ ದ.ಆಫ್ರಿಕಾದಲ್ಲಿ ಕರಿಯರ ವಿರುದ್ಧದ ತಾರತಮ್ಯ ವಿವಿಧ ರೂಪಗಳಲ್ಲಿ ವಿಶ್ವಾದ್ಯಂತ ಅಸ್ತಿತ್ವದಲ್ಲಿದೆ. ಮಹಿಳೆಯರು ಶಿಕ್ಷಣವನ್ನು ಪಡೆಯುವಂತಿಲ್ಲ ಎಂದು ತಾಲಿಬಾನಿಗಳು ಹೇಳುತ್ತಿರುವುದು ಅಥವಾ ಇರಾನ್‌ನಲ್ಲಿಯ ಹಿಜಾಬ್ ವಿವಾದ ಇವೆಲ್ಲ ಈ ರೂಪಗಳಾಗಿವೆ. ಈ ವಿಷಯ (ಫುಲೆ)ವನ್ನು ಜನರು ಮುಟ್ಟದಿರಲು ಕಾರಣಗಳಲ್ಲಿ ಒಂದೆಂದರೆ ಅದು ಕೆಲವರಿಗೆ ಅವರು ನಿರೀಕ್ಷಿಸಿರದ ಹೊಡೆತವನ್ನು ನೀಡುತ್ತದೆ ಎನ್ನುವುದಾಗಿದೆ ಎಂದು ಮಹಾದೇವನ್ ಹೇಳಿದರು.

ಕೃಪೆ: theprint.in

Similar News