ಪಾಕಿಸ್ತಾನದಾದ್ಯಂತ ವಿದ್ಯುತ್ ಕಡಿತ‌

Update: 2023-01-23 17:58 GMT

ಇಸ್ಲಮಾಬಾದ್, ಜ.23: ಪಾಕಿಸ್ತಾನದ ರಾಷ್ಟ್ರೀಯ ಗ್ರಿಡ್ನಲ್ಲಿ ಪ್ರಮುಖ ಸಮಸ್ಯೆಯಿಂದಾಗಿ ಸೋಮವಾರ ಬೆಳಿಗ್ಗೆ ಪ್ರಮುಖ ನಗರಗಳಾದ ಇಸ್ಲಮಾಬಾದ್, ಕರಾಚಿ ಸೇರಿದಂತೆ ದೇಶದಾದ್ಯಂತ ವಿದ್ಯುತ್ ಸ್ಥಗಿತಗೊಂಡಿದೆ ಎಂದು ಇಂಧನ ಸಚಿವಾಲಯದ ಹೇಳಿಕೆ ತಿಳಿಸಿದೆ.

ಆರಂಭಿಕ ಮಾಹಿತಿಯ ಪ್ರಕಾರ, ಇವತ್ತು ಬೆಳಿಗ್ಗೆ ಸ್ಥಳೀಯ ಕಾಲಮಾನ ಸುಮಾರು 7:34ಕ್ಕೆ ರಾಷ್ಟ್ರೀಯ ಗ್ರಿಡ್ನಲ್ಲಿ ಫ್ರೀಕ್ವೆನ್ಸಿ ವೈಫಲ್ಯದಿಂದ ದೊಡ್ಡ ಸ್ಥಗಿತ ಉಂಟಾಗಿದೆ. ವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸಲು ತ್ವರಿತ ಕೆಲಸ ನಡೆಯುತ್ತಿದ್ದು ಇಸ್ಲಮಾಬಾದ್ ಮತ್ತು ಪೇಷಾವರದ ಕೆಲವೆಡೆ ವಿದ್ಯುತ್ ಪೂರೈಕೆ ಆರಂಭವಾಗಿದೆ ಎಂದು ಸಚಿವಾಲಯ ಹೇಳಿದೆ.

ಕರಾಚಿ, ಇಸ್ಲಮಾಬಾದ್, ಲಾಹೋರ್, ಪೇಷಾವರ ಸೇರಿದಂತೆ ಪ್ರಮುಖ ನಗರಗಳಲ್ಲಿ ವಿದ್ಯುತ್ ಸ್ಥಗಿತಗೊಂಡಿದೆ. ಪಾಕಿಸ್ತಾನದ ವಿದ್ಯುಚ್ಛಕ್ತಿ ವಿತರಣಾ ವ್ಯವಸ್ಥೆಯು ಸಂಕೀರ್ಣ ಮತ್ತು ಸೂಕ್ಷ್ಮ ಜಾಲವಾಗಿದ್ದು ಗ್ರಿಡ್ನ ಒಂದು ವಿಭಾಗದಲ್ಲಿನ ಸಮಸ್ಯೆಯು ದೇಶದಾದ್ಯಂತ ಸರಣಿ ವೈಫಲ್ಯಕ್ಕೆ ಕಾರಣವಾಗುತ್ತದೆ.

Similar News