ಕ್ಯಾಲಿಫೋರ್ನಿಯಾ ಗುಂಡಿನ ದಾಳಿ ಪ್ರಕರಣ: ಶಂಕಿತ ಆರೋಪಿ ಆತ್ಮಹತ್ಯೆ

Update: 2023-01-23 18:05 GMT

ವಾಷಿಂಗ್ಟನ್, ಜ.23: ಕ್ಯಾಲಿಫೋರ್ನಿಯಾದ ಮಾಂಟಿರೆ ಪಾರ್ಕ್ ನಲ್ಲಿ ರವಿವಾರ ಗುಂಡಿನ ದಾಳಿ ನಡೆಸಿ 10 ಮಂದಿಯ ಸಾವಿಗೆ ಕಾರಣವಾಗಿದ್ದ ಶಂಕಿತ ಆರೋಪಿ ತನ್ನ ವಾಹನದಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ಏಕಾಏಕಿ ಗುಂಡು ಹಾರಿಸಿ 10 ಮಂದಿಯನ್ನು ಹತ್ಯೆ ಮಾಡಿದ ಬಳಿಕ ಆರೋಪಿ ಮತ್ತೊಂದು ಸುತ್ತಿನ ದಾಳಿಗೆ ಸಿದ್ಧವಾಗುತ್ತಿದ್ದಂತೆಯೇ ಅಲ್ಲಿದ್ದ ಜನರು ಅದನ್ನು ವಿಫಲಗೊಳಿಸಿದ್ದರು. ಬಳಿಕ ಆರೋಪಿ ತಾನು ಬಂದಿದ್ದ ವ್ಯಾನ್ನಲ್ಲಿ ಪರಾರಿಯಾಗಿದ್ದ. ಆರೋಪಿಯನ್ನು 72 ವರ್ಷದ ಹುವುಕಾನ್ ಟ್ರಾನ್ ಎಂದು ಗುರುತಿಸಲಾಗಿತ್ತು. ಬಳಿಕ ಈ ವಾಹನ ಟೊರೆನ್ಸ್ ಗ್ರಾಮದಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Similar News