ಹಣ ಅಕ್ರಮ ವರ್ಗಾವಣೆ ಆರೋಪ ರದ್ದುಗೊಳಿಸಲು ಕೋರಿದ ರಾಘವ್ ಬಹ್ಲ್ ಅರ್ಜಿ ತಿರಸ್ಕರಿಸಿದ ಹೈಕೋರ್ಟ್
Update: 2023-01-24 00:04 IST
ಹೊಸದಿಲ್ಲಿ, ಜ. 23: ತನ್ನ ವಿರುದ್ಧದ ಹಣ ಅಕ್ರಮ ವರ್ಗಾವಣೆ ಪ್ರಕರಣ ರದ್ದುಗೊಳಿಸುವಂತೆ ಕೋರಿ ನ್ಯೂಸ್ ವೆಬ್‌ಸೈಟ್ ‘ದಿ ಕ್ವಿಂಟ್’ನ ಸ್ಥಾಪಕ ರಾಘವ ಬಹ್ಲ ಸಲ್ಲಿಸಿದ ಮನವಿಯನ್ನು ದಿಲ್ಲಿ ಉಚ್ಚ ನ್ಯಾಯಾಲಯ ಸೋಮವಾರ ತಿರಸ್ಕರಿಸಿದೆ.
ಲಂಡನ್‌ನಲ್ಲಿ ಆಸ್ತಿ ಖರೀದಿಸಲು ಬಳಸಲಾದ ಸುಮಾರು 2.45 ಕೋ. ರೂ. ನಿಧಿಯನ್ನು ಬಹಿರಂಗಪಡಿಸದೇ ಇರುವ ಆರೋಪದ ಹಿನ್ನೆಲೆಯಲ್ಲಿ ಬಹ್ಲ್ ಅವರ ವಿರುದ್ಧ ಆದಾಯ ತೆರಿಗೆ ಇಲಾಖೆ ಆರೋಪ ಪಟ್ಟಿ ಸಲ್ಲಿಸಿತ್ತು. ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ 2019ರಲ್ಲಿ ಈ ಪ್ರಕರಣ ದಾಖಲಿಸಲಾಗಿತ್ತು.
ಆರೋಪಗಳು ಇನ್ನೂ ವಿಚಾರಣೆಯ ಹಂತವನ್ನು ತಲುಪಿಲ್ಲ ಎಂದು ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ಅವರು ಹೇಳಿದರು.