×
Ad

ವಿಮಾನ ಸಿಬ್ಬಂದಿ ಜತೆ ಅನುಚಿತ ವರ್ತನೆ ಆರೋಪ: ಪ್ರಯಾಣಿಕನನ್ನುಕೆಳಗಿಳಿಸಿದ ಸ್ಪೈಸ್‌ಜೆಟ್

Update: 2023-01-24 07:31 IST

ಹೊಸದಿಲ್ಲಿ: ವಿಮಾನ ಸಿಬ್ಬಂದಿ ಜತೆ ಅನುಚಿತವಾಗಿ ವರ್ತಿಸಿದ ಆರೋಪದಲ್ಲಿ ಪ್ರಯಾಣಿಕನೊಬ್ಬನನ್ನು ವಿಮಾನದಿಂದ ಕೆಳಕ್ಕೆ ಇಳಿಸಿದ ಪ್ರಕರಣ ದೆಹಲಿ ವಿಮಾನ ನಿಲ್ದಾಣದಲ್ಲಿ ಸೋಮವಾರ ನಡೆದಿದೆ.

ಈ ಪ್ರಯಾಣಿಕ ವಿಮಾನದಲ್ಲಿದ್ದ ಮಹಿಳಾ ಸಿಬ್ಬಂದಿಯನ್ನು ಅಸಭ್ಯ ರೀತಿಯಿಂದ ಸ್ಪರ್ಶಿಸಿದ ಎನ್ನಲಾಗಿದೆ. ದೆಹಲಿಯಿಂದ ಹೈದರಾಬಾದ್‌ಗೆ ಹೊರಡಲು ಅಣಿಯಾಗಿದ್ದ ವಿಮಾನಕ್ಕೆ ಪ್ರಯಾಣಿಕರು ಏರುವ ವೇಳೆ ಈ ಘಟನೆ ನಡೆದಿದೆ. ಅಸಭ್ಯವಾಗಿ ವರ್ತಿಸಿದ ವ್ಯಕ್ತಿಯ ಜತೆಗೆ ಆತನ ಜತೆಗಿದ್ದ ವ್ಯಕ್ತಿಯನ್ನೂ ಕೆಳಕ್ಕೆ ಇಳಿಸಲಾಗಿದೆ ಎಂದು ಏರ್‌ಲೈನ್ಸ್ ಹೇಳಿದೆ.

ವಿಮಾನ ಏರುವ ವೇಳೆ ಈ ಪ್ರಯಾಣಿಕ ಅಸಭ್ಯವಾಗಿ ವರ್ತಿಸಿದ ಹಾಗೂ ಮಹಿಳಾ ಸಿಬ್ಬಂದಿಯನ್ನು ಅನುಚಿತವಾಗಿ ಸ್ಪರ್ಶಿಸಿದ ಎಂದು ಮೂಲಗಳು ತಿಳಿಸಿವೆ.

ಮಹಿಳಾ ಸಿಬ್ಬಂದಿಯ ಲಿಖಿತ ದೂರಿನ ಮೇರೆಗೆ ಪ್ರಯಾಣಿಕನನ್ನು ಇಳಿಸಲಾಯಿತು ಹಾಗೂ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಯಿತು ಎಂದು ಏರ್‌ಲೈನ್ಸ್ ಸ್ಪಷ್ಟಪಡಿಸಿದೆ.

Similar News