ಮೇಲುಸ್ತುವಾರಿ ಸಮಿತಿ ರಚಿಸುವ ಮುನ್ನ ಸರ್ಕಾರ ನಮ್ಮನ್ನು ಸಂಪರ್ಕಿಸಿಲ್ಲ: ಕುಸ್ತಿಪಟುಗಳ ಆರೋಪ

Update: 2023-01-24 11:42 GMT

ಹೊಸದಿಲ್ಲಿ: ಭಾರತದ ಕುಸ್ತಿ ಫೆಡರೇಷನ್‌ ಅಧ್ಯಕ್ಷರ ವಿರುದ್ಧ ಲೈಂಗಿಕ ಕಿರುಕುಳ ಸಹಿತ ಇನ್ನಿತರ ಆರೋಪ ಹೊರಿಸಿ ಕಳೆದ ವಾರ ಭಾರತದ ಖ್ಯಾತ ಕುಸ್ತಿಪಟುಗಳು ನಡೆಸಿದ ಪ್ರತಿಭಟನೆಗಳ ನಂತರ ಕೇಂದ್ರ ಕ್ರೀಡಾ ಸಚಿವಾಲಯವು ಖ್ಯಾತ ಬಾಕ್ಸರ್‌ ಮೇರಿ ಕೋಮ್‌ (Mary Kom) ನೇತೃತ್ವದ ಮೇಲುಸ್ತುವಾರಿ ಸಮಿತಿಯನ್ನು ರಚಿಸಿದ್ದರೂ ಈ ಸಮಿತಿ ರಚಿಸುವ ಮುನ್ನ ತಮ್ಮನ್ನು ವಿಶ್ವಾಸಕ್ಕೆ ಪಡೆದುಕೊಳ್ಳಲಾಗಿಲ್ಲ ಎಂದು ಕುಸ್ತಿಪಟುಗಳು (wrestlers) ಆರೋಪಿಸಿದ್ದಾರೆ.

ವಿನೇಶ್‌ ಫೋಗಟ್‌ (Vinesh Phogat) ಹಾಗೂ ಬಜರಂಗ್‌ ಪೂನಿಯಾ (Bajrang Punia) ಟ್ವೀಟ್‌ ಮಾಡಿ ಸಮಿತಿ ರಚಿಸುವ ಮುನ್ನ ತಮ್ಮನ್ನು ಸಂಪರ್ಕಿಸಲಾಗಿಲ್ಲ ಎಂದಿದ್ದಾರೆ.

"ಸಮಿತಿ ರಚನೆ ಮುನ್ನ ನಮ್ಮನ್ನು ಸಂಪರ್ಕಿಸಲಾಗುವುದು ಎಂದು ಭರವಸೆ ನೀಡಲಾಗಿತ್ತು. ಆದರೆ ನಮ್ಮನ್ನು ಈ ಸಮಿತಿ ರಚನೆ ಮುನ್ನ ಸಂಪರ್ಕಿಸಿಯೇ ಇಲ್ಲ ಎನ್ನುವುದು ನೋವು ತಂದಿದೆ," ಎಂದು ವಿನೇಶ್‌ ಫೋಗಟ್‌ ಟ್ವೀಟ್‌ ಮಾಡಿದ್ದಾರಲ್ಲದೆ ಜೊತೆಗೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಹಾಗೂ ಕ್ರೀಡಾ ಸಚಿವ ಅನುರಾಗ್‌ ಠಾಕುರ್‌ ಅವರನ್ನು ಟ್ಯಾಗ್‌ ಮಾಡಿದ್ದಾರೆ.

ಕ್ರೀಡಾ ಸಚಿವಾಲಯ ಈಗಾಗಲೇ ತಿಳಿಸಿದಂತೆ ಮೇರಿ ಕೋಮ್‌ ನೇತೃತ್ವದ ಸಮಿತಿ ಕುಸ್ತಿ ಫೆಡರೇಶನ್‌ ಅಧ್ಯಕ್ಷರ ವಿರುದ್ಧದ ಆರೋಪಗಳನ್ನು ತನಿಖೆ ನಡೆಸಲಿದೆ ಹಾಗೂ ಮುಂದಿನ ಒಂದು ತಿಂಗಳ ತನಕ ಫೆಡರೇಶನ್‌ ಕಾರ್ಯಚಟುವಟಿಕೆಗಳನ್ನು ನಿರ್ವಹಿಸಲಿದೆ.

ಇದನ್ನೂ ಓದಿ: ಮೂರು ವರ್ಷಗಳ ನಂತರ ಮೊದಲ ಏಕದಿನ ಶತಕ ಬಾರಿಸಿದ ರೋಹಿತ್‌ ಶರ್ಮ

Similar News