ಒಂದೇ ಲೀಗ್ ನಲ್ಲಿ ಮತ್ತೊಮ್ಮೆ ಮೆಸ್ಸಿ-ರೊನಾಲ್ಡೊ ಆಡಲಿದ್ದಾರೆ: ಸೌದಿ ಫುಟ್ಬಾಲ್ ಅಧಿಕಾರಿ ಸುಳಿವು

Update: 2023-01-25 08:43 GMT

 ರಿಯಾದ್: ಕ್ರಿಸ್ಟಿಯಾನೊ ರೊನಾಲ್ಡೊ (Cristiano Ronaldo) ಸೌದಿ ಅರೇಬಿಯಾ ಕ್ಲಬ್ ಅಲ್-ನಸ್ರ್‌ಗೆ  ಸೇರಿದ ನಂತರ ದೇಶದಲ್ಲಿ ಫುಟ್ಬಾಲ್ ಲೀಗ್ ಹಿಂದೆಂದೂ ಕಾಣದಷ್ಟು  ಗಮನ ಸೆಳೆಯುತ್ತಿದೆ. ಕಳೆದ ವಾರ  ಲಿಯೊನೆಲ್ ಮೆಸ್ಸಿ( Lionel Messi) ನೇತೃತ್ವದ ಪ್ಯಾರಿಸ್ ಸೇಂಟ್-ಜರ್ಮೈನ್  ಕೂಡ  ದೇಶಾದ್ಯಂತ ಪ್ರವಾಸ ಮಾಡಿದ್ದು, ಸೌದಿ ಆಲ್ ಸ್ಟಾರ್ ಇಲೆವೆನ್ ವಿರುದ್ಧ ಸೌಹಾರ್ದ ಪಂದ್ಯವನ್ನು ಆಡಿತ್ತು. ಅದರಲ್ಲಿ ರೊನಾಲ್ಡೊ  ಅವರು ಸ್ಟಾರ್ ಇಲೆವೆನ್ ತಂಡದಲ್ಲಿದ್ದರು.

ರೊನಾಲ್ಡೊ ಅವರು ಸೌದಿ ಪ್ರೊ ಲೀಗ್‌ನಲ್ಲಿ ಗೆಲುವಿನ ಆರಂಭವನ್ನು ಮಾಡಿದ್ದಾರೆ. ರೊನಾಲ್ಡೊ ನಾಯಕತ್ವದದ ಅಲ್ ನಸ್ರ್  ತಂಡ ರವಿವಾರ ಎಟಿಫಾಕ್ ವಿರುದ್ಧ 1-0 ಗೆಲುವು ಸಾಧಿಸಿತ್ತು.

"ಈ ಸಮಯದಲ್ಲಿ ಲಿಯೊನೆಲ್ ಮೆಸ್ಸಿ ಆಗಮನದ ಬಗ್ಗೆ ನಮಗೆ ಏನೂ ತಿಳಿದಿಲ್ಲ, ಆದರೂ ಸೌದಿ ಫೆಡರೇಶನ್ ಮೆಸ್ಸಿ ಅವರನ್ನು  ಒಂದು ದಿನ ದೇಶೀಯ ಲೀಗ್‌ನಲ್ಲಿ ಆಡಿಸಲು ಬಯಸುತ್ತದೆ ಎಂಬ ವಿಚಾರವನ್ನು ನಾನು ಮರೆ ಮಾಚುವುದಿಲ್ಲ" ಎಂದು ಸೌದಿ ಫುಟ್ಬಾಲ್ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಇಬ್ರಾಹೀಂ ಅಲ್ ಖಾಸಿಮ್ MARCA ಗೆ ತಿಳಿಸಿದರು.

"ಫೆಡರೇಶನ್‌ನ ಯೋಚನೆಯು ಯಾವಾಗಲೂ ನಮ್ಮ ಫುಟ್ಬಾಲ್  ಅನ್ನು ಸುಧಾರಿಸುವುದಾಗಿದೆ. ಕ್ರಿಸ್ಟಿಯಾನೊ ರೊನಾಲ್ಡೊ ಹಾಗೂ ಮೆಸ್ಸಿಯವರನ್ನು ಮತ್ತೆ ಅದೇ ಲೀಗ್‌ನಲ್ಲಿ ನೋಡಲು ನಾವು ಬಯಸುತ್ತೇವೆ.   ಸತ್ಯವೇನೆಂದರೆ ನಮಗೆ ಈಗ ಏನೂ ತಿಳಿದಿಲ್ಲ’’ ಎಂದು ಅವರು ಹೇಳಿದರು.

Similar News