ಸಂವಿಧಾನ ಭಾರತೀಯರ ಪವಿತ್ರ ಗ್ರಂಥ: ಶಾಸಕ ಖಾದರ್

ಉಳ್ಳಾಲದಲ್ಲಿ 74ನೇ ಗಣರಾಜ್ಯೋತ್ಸವ ಆಚರಣೆ

Update: 2023-01-26 09:29 GMT

ಉಳ್ಳಾಲ, ಜ.26: ಉಳ್ಳಾಲ ತಾಲೂಕಿನಲ್ಲಿ 74 ನೇ ಗಣರಾಜ್ಯೋತ್ಸವನ್ನು ಸಂಭ್ರಮದಿಂದ ಆಚರಿಸಲಾಯಿತು.

ತೊಕ್ಕೊಟ್ಟಿನಲ್ಲಿರುವ 110 ಅಡಿ ಎತ್ತರದ ಧ್ವಜಸ್ತಂಭದಲ್ಲಿ ಶಾಸಕ, ವಿದಾನಸಭಾ ಪ್ರತಿಪಕ್ಷ ಉಪನಾಯಕ ಯು.ಟಿ.ಖಾದರ್ ರಾಷ್ಟ್ರಧ್ವಜಾರೋಹಣಗೈದರು.

ಈ ವೇಳೆ ಮಾತನಾಡಿದ ಅವರು, ಸಂವಿಧಾನ ರಕ್ಷಣೆಯಿಂದ ದೇಶ ರಕ್ಷಣೆಯಾಗುತ್ತದೆ. ಆಯಾ ಧರ್ಮದವರಿಗೆ ಭಗವದ್ಗೀತೆ, ಕುರ್ ಆನ್, ಬೈಬಲ್ ಹೇಗೆ ಪವಿತ್ರವೋ ಹಾಗೆಯೇ ಭಾರತೀಯರೆಲ್ಲರಿಗೂ ದೇಶದ ಸಂವಿಧಾನವೇ ಪವಿತ್ರ ಗಂಥ ಎಂದರು.

ಹಾಗಾಗಿ ನಾವೆಲ್ಲರು ನಮ್ಮ ದೇಶದ ಸಂವಿಧಾನದ  ಘನತೆಯನ್ನ ಗೌರವಿಸುವ ಕಾರ್ಯ ನಡೆಸಬೇಕು. ಇಂದು ರಾಷ್ಟ್ರಧ್ವಜವು 110 ಅಡಿ ಎತ್ತರಕ್ಕೆ ಹಾರಿದ್ದು ಮುಂದಿನ ವರುಷ 400 ಅಡಿ ಎತ್ತರದಲ್ಲಿ ಧ್ವಜವನ್ನು ನನ್ನ ಕ್ಷೇತ್ರದಲ್ಲಿ ಹಾರಿಸುತ್ತೇನೆಂದು ಹೇಳಿದರು.

ಧ್ವಜಾರೋಹಣಕ್ಕೂ ಮುನ್ನ ಉಳ್ಳಾಲ ಅಬ್ಬಕ್ಕ ವೃತ್ತದಿಂದ ತೊಕ್ಕೊಟ್ಟಿನವರೆಗೆ ಆಕರ್ಷಕ ಪಥ ಸಂಚಲನ ನಡೆಯಿತು.

ಕಾರ್ಯಕ್ರಮ ದಲ್ಲಿ  ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್ , ಉಳ್ಳಾಲ ನಗರ ಸಭೆ ಪೌರಾಯುಕ್ತ ವಿದ್ಯಾ ಕಾಳೆ, ಅಧ್ಯಕ್ಷ ಚಿತ್ರ ಕಲಾ, ಉಪಾಧ್ಯಕ್ಷ ಅಯ್ಯೂಬ್ ಮಂಚಿಲ, ಉಳ್ಳಾಲ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್, ಫಾರೂಕ್ ಉಳ್ಳಾಲ್, ಮುಹಮ್ಮದ್ ಮುಕಚೇರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್, ತಹಶೀಲ್ದಾರ್ ಡಿ.ಎ. ಪುಟ್ಟರಾಜು, ಉಪತಹಶೀಲ್ದಾರ್ ನವನೀತ್ ಮಾಳವ, ತಾಲೂಕು ಕಚೇರಿ ಸಿಬ್ಬಂದಿ ಕಿರಣ್ ಕುಮಾರ್, ಕಂದಾಯ ನಿರೀಕ್ಷಕ ತೌಫೀಕ್,  ಜಗದೀಶ್ ಶೆಟ್ಟಿ, ಸಂತೋಷ್ ಕುಮಾರ್, ಸುರೇಶ್ ಎಂ, ಗ್ರಾಮ ಸಹಾಯಕರಾದ ನವನೀತ್ ವಿವಿಧ ಇಲಾಖೆಗಳ ಅಧಿಕಾರಿಗಳು, ಶಿಕ್ಷಕರು ಉಪಸ್ಥಿತರಿದ್ದರು.

Similar News