ರಾಹುಲ್ ಗಾಂಧಿಯೊಂದಿಗೆ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡ ಮೆಹಬೂಬಾ ಮುಫ್ತಿ

Update: 2023-01-28 08:12 GMT

ಶ್ರೀನಗರ:  ಜಮ್ಮು -ಕಾಶ್ಮೀರದ ಅವಂತಿಪೋರಾದಿಂದ ಶನಿವಾರ ಬೆಳಗ್ಗೆ ಕಾಂಗ್ರೆಸ್‌ನ ಭಾರತ್ ಜೋಡೊ ಯಾತ್ರೆ ಪುನರಾರಂಭವಾಯಿತು.  ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ(Mehbooba Mufti ) ಅವರು ರಾಹುಲ್ ಗಾಂಧಿ ಹಾಗೂ  ಇತರ ಕಾಂಗ್ರೆಸ್ ನಾಯಕರನ್ನು ಸೇರಿಕೊಂಡರು.  ಭದ್ರತಾ ಲೋಪಗಳ ಕಾರಣ ಶನಿವಾರ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿತ್ತು.

ಮುಫ್ತಿ ಅವರು ಹಲವಾರು ಮಹಿಳೆಯರೊಂದಿಗೆ ರಾಹುಲ್ ಗಾಂಧಿ ಅವರೊಂದಿಗೆ ಚುರ್ಸುನಿಂದ ಪಾದಯಾತ್ರೆಯಲ್ಲಿ ಭಾಗವಹಿಸಿದರು. ಪ್ರಿಯಾಂಕಾ ಗಾಂಧಿ ಕೂಡ ಶ್ರೀನಗರಕ್ಕೆ ಬಂದಿಳಿದಿದ್ದು, ಇಂದು ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಪಾಂಪೋರ್‌ನ ಬಿರ್ಲಾ ಇಂಟರ್‌ನ್ಯಾಶನಲ್ ಸ್ಕೂಲ್ ಬಳಿ ಚಹಾ ವಿರಾಮವಿರುತ್ತದೆ ಹಾಗೂ  ಶ್ರೀನಗರದ ಹೊರವಲಯದಲ್ಲಿರುವ ಪಂಥಾ ಚೌಕ್‌ನಲ್ಲಿರುವ ಟ್ರಕ್ ಯಾರ್ಡ್‌ನಲ್ಲಿ ರಾತ್ರಿ ನಿಲುಗಡೆ ಇರುತ್ತದೆ.

ಜನವರಿ 29 ರಂದು ಯಾತ್ರೆಯು ಪಂಥಾ ಚೌಕ್‌ನಿಂದ ಪುನರಾರಂಭವಾಗುತ್ತದೆ ಹಾಗೂ  ಬೌಲೆವಾರ್ಡ್ ರಸ್ತೆಯಲ್ಲಿ ನೆಹರು ಪಾರ್ಕ್‌ವರೆಗೆ ನಡೆಯುತ್ತದೆ. ರಾಹುಲ್ ಗಾಂಧಿ ಅಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಕಾಶ್ಮೀರ ಕಣಿವೆಯನ್ನು ಪ್ರವೇಶಿಸಿದ ನಂತರ ಶುಕ್ರವಾರ ರಾಹುಲ್ ಗಾಂಧಿ ಅವರು ತಮ್ಮ ಪಾದಯಾತ್ರೆಯನ್ನು ರದ್ದುಗೊಳಿಸಬೇಕಾಯಿತು. ಶುಕ್ರವಾರ  ಯಾತ್ರೆಯ ವೇಳೆ ಭದ್ರತಾ ಲೋಪವಾಗಿದೆ. ಕೇಂದ್ರಾಡಳಿತ ಪ್ರದೇಶದ ಆಡಳಿತದ ಪೊಲೀಸ್ ವ್ಯವಸ್ಥೆಯು "ಸಂಪೂರ್ಣವಾಗಿ ಕುಸಿದಿದೆ" ಎಂದು ಎಂದು ಕಾಂಗ್ರೆಸ್  ಆರೋಪಿಸಿದೆ.

Similar News