ಹಾಕಿ ವಿಶ್ವಕಪ್: ಜರ್ಮನಿ ಚಾಂಪಿಯನ್, ಪೆನಾಲ್ಟಿ ಶೂಟೌಟ್‌ನಲ್ಲಿ ಬೆಲ್ಜಿಯಮ್ ಔಟ್

Update: 2023-01-29 17:30 GMT

ಭುವನೇಶ್ವರ, ಜ.29: ಹಾಲಿ ಚಾಂಪಿಯನ್ ಬೆಲ್ಜಿಯಮ್ ತಂಡವನ್ನು ರವಿವಾರ ನಡೆದ ಫೈನಲ್‌ನಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ 5-4 ಅಂತರದಿಂದ ರೋಚಕವಾಗಿ ಮಣಿಸಿದ ಜರ್ಮನಿ ಮೂರನೇ ಬಾರಿ ಹಾಕಿ ವಿಶ್ವಕಪ್ ಜಯಿಸಿದೆ.

ಈ ಸೋಲಿನಿಂದಾಗಿ ಬೆಲ್ಜಿಯಮ್ ತಂಡಕ್ಕೆ ಪಾಕಿಸ್ತಾನ, ಜರ್ಮನಿ ಹಾಗೂ ಆಸ್ಟ್ರೇಲಿಯದ ನಂತರ ಪ್ರಶಸ್ತಿ ತನ್ನಲ್ಲೇ ಉಳಿಸಿಕೊಂಡ 4ನೇ ತಂಡ ಎಂಬ ಹಿರಿಮೆಗೆ ಪಾತ್ರವಾಗುವ ಕನಸು ಈಡೇರಲಿಲ್ಲ. ಆದರೆ ಅದು ಕೊನೆಯ ತನಕ ಹೋರಾಟ ನೀಡುವಲ್ಲಿ ಯಶಸ್ವಿಯಾಯಿತು.

ಇದಕ್ಕೂ ಮೊದಲು ಕಳಿಂಗ ಸ್ಟೇಡಿಯಮ್‌ನಲ್ಲಿ ಉಭಯ ತಂಡಗಳು ನಿಗದಿತ ಸಮಯದ ಆಟದಲ್ಲಿ ತೀವ್ರ ಪೈಪೋಟಿ ನಡೆಸಿದ್ದು, 3-3ರಿಂದ ಸಮಬಲ ಸಾಧಿಸಿದವು. ಈ ಹಿನ್ನೆಲೆಯಲ್ಲಿ ಪಂದ್ಯದ ಫಲಿತಾಂಶವನ್ನು ನಿರ್ಧರಿಸಲು ಪೆನಾಲ್ಟಿ ಶೂಟೌಟ್ ಮೊರೆ ಹೋಗಲಾಯಿತು.
 

Similar News