ರಾಜ್ಯಮಟ್ಟದ ಇಂಗ್ಲೀಷ್ ಪ್ರಬಂಧ ಸ್ಪರ್ಧೆ: ಪಿಪಿಸಿಯ ವೈಷ್ಣವಿಗೆ ದ್ವಿತೀಯ ಬಹುಮಾನ
Update: 2023-01-29 21:30 IST
ಉಡುಪಿ: ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ ಕರ್ನಾಟಕ ಸರಕಾರ ಆಯೋಜಿಸಿದ್ದ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಇಂಗ್ಲೀಷ್ ಪ್ರಬಂಧ ಸ್ಪರ್ಧೆಯಲ್ಲಿ ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ತೃತೀಯ ಬಿಕಾಂ ವಿದ್ಯಾರ್ಥಿನಿ ವೈಷ್ಣವಿ ಅನಂತ ಮೆಸ್ತಾ ಇವರು ದ್ವಿತೀಯ ಸ್ಥಾನ ಪಡೆದಿದ್ದಾರೆ.
ರಾಷ್ಟ್ರೀಯ ಮತದಾರರ ದಿನದಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮ ದಲ್ಲಿ ವೈಷ್ಣವಿ ಅವರು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್‌ರಿಂದ ಬಹುಮಾನವನ್ನು ಸ್ವೀಕರಿಸಿದರು.
ವೈಷ್ಣವಿ ಅವರು ಅನಂತ ಮಂಜುನಾಥ ಮೆಸ್ತಾ ಹಾಗೂ ಶಕುಂತಳಾ ಅನಂತ ಮೆಸ್ತಾ ಇವರ ಪುತ್ರಿ.