ದ್ವೇಷದ ಸಿದ್ಧಾಂತ ಭಾರತವನ್ನು ಕಬಳಿಸುತ್ತಿದೆ: ಗಾಂಧೀಜಿ ಮರಿ ಮೊಮ್ಮಗ ತುಷಾರ್ ಗಾಂಧಿ

Update: 2023-01-29 16:49 GMT

ಮುಂಬೈ, ಜ. 29: ದ್ವೇಷದ ಸಿದ್ಧಾಂತ ಭಾರತವನ್ನು ಕಬಳಿಸುತ್ತಿದೆ ಎಂದು ಮಹಾತ್ಮಾ ಗಾಂಧಿ(Mahatma Gandhi) ಅವರ ಮರಿ ಮೊಮ್ಮಗ ಹಾಗೂ ಲೇಖಕ, ಸಾಮಾಜಿಕ ಹೋರಾಟಗಾರ ತುಷಾರ್ ಗಾಂಧಿ(Tushar Gandhi) ಅವರು ರವಿವಾರ ಹೇಳಿದ್ದಾರೆ. ಮಹಾತ್ಮಾ ಗಾಂಧಿ ಅವರ 75ನೇ ಪುಣ್ಯ ತಿಥಿಯ ಹಿನ್ನೆಲೆಯಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ತೀವ್ರಗೊಳ್ಳುತ್ತಿರುವ ಹಿಂದೂ ರಾಷ್ಟ್ರೀಯವಾದ ಮಹಾತ್ಮಾ ಗಾಂಧಿ ಅವರ ಪರಂಪರೆಗೆ ವಿರುದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ.

ಭಾರತ ಹಾಗೂ ಭಾರತದ ಮನಸ್ಸನ್ನು ಸಂಪೂರ್ಣವಾಗಿ ಆಕ್ರಮಿಸಿಕೊಂಡಿರುವುದು ದ್ವೇಷದ ಸಿದ್ಧಾಂತ, ಧ್ರುವೀಕರಣದ ಸಿದ್ಧಾಂತ, ವಿಭಜನೆಯ ಸಿದ್ಧಾಂತ ಎಂದು ಅವರು ಮುಂಬೈಯ ತನ್ನ ನಿವಾಸದಲ್ಲಿ ಹೇಳಿದ್ದಾರೆ. ಈ ಬದಲಾವಣೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಹಿಂದೂ ರಾಷ್ಟ್ರೀಯವಾದಿ ಬಿಜೆಪಿಯ ಉತ್ಥಾನಕ್ಕೆ ಕಾರಣವಾಯಿತು. ಅವರಿಗೆ ಗೋಡ್ಸೆ ಅಪ್ರತಿಮ ದೇಶಭಕ್ತ, ಆರಾಧ್ಯ ದೈವವಾಗುವುದು ಸಹಜ ಎಂದು ಅವರು ಹೇಳಿದ್ದಾರೆ. ಮೋದಿ ಅವರು 2014ರಲ್ಲಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು.

 ಅನಂತರ ಅವರು ಜಾತ್ಯತೀತವಾದ ಹಾಗೂ ಬಹುಸಂಸ್ಕೃತಿಯನ್ನು ನಾಶ ಮಾಡಿದರು. ಅವರು ದ್ವೇಷದ ಮೇಲೆ ಯಶಸ್ಸು ಪಡೆದರು ಎಂದು ತುಷಾರ್ ಗಾಂಧಿ ಹೇಳಿದ್ದಾರೆ. 

Similar News