ಬೀಡಿ ಕಾರ್ಮಿಕರಿಗೆ ಕೆಲಸ ನಿರಾಕರಣೆ: ಪರಿಹಾರ ನೀಡುವಂತೆ ಮನವಿ

Update: 2023-01-30 13:25 GMT

ಉಡುಪಿ: ಬೀಡಿ ಕಂಪೆನಿಗಳು ನಿರಾಕರಿಸಿರುವ ಬೀಡಿ ಕಾರ್ಮಿಕರಿಗೆ ಕೆಲಸ ಕೊಡಿಸಬೇಕು ಮತ್ತು ಅದಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಉಡುಪಿ ಜಿಲ್ಲಾ ಬೀಡಿ ಕಾರ್ಮಿಕರ ಫೆಡರೇಶನ್ ನಿಯೋಗವು ಸೋಮವಾರ ಕಾರ್ಮಿಕ ಅಧಿಕಾರಿಗೆ ಮನವಿ ಸಲ್ಲಿಸಿತು.

ಉಡುಪಿ ಮತ್ತು ದ.ಕ ಜಿಲ್ಲೆಗಳಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಬೀಡಿ ಕಾರ್ಮಿಕ ರಿದ್ದು, ಜಿಲ್ಲೆಯಲ್ಲಿರುವ ಬೀಡಿ ಕಾರ್ಮಿಕರು ಬೀಡಿ ಉದ್ಯಮವನ್ನು ನಂಬಿ ಬೀಡಿ ಕಟ್ಟಿ ತಮ್ಮ ಜೀವನ ಸಾಗಿಸುತ್ತಿದ್ದಾರೆ. ಇತ್ತೀಚೆಗೆ ಭಾರತ್ ಬೀಡಿ ಕಂಪನಿ ಹಾಗೂ ಪ್ರಕಾಶ್ ಬೀಡಿ ಕಂಪನಿಯವರು ಜ.21ರಿಂದ ಬೀಡಿ ಕಾರ್ಮಿಕರಿಗೆ ಕೆಲಸ ಕೊಡದೆ ನಿಲ್ಲಿಸಿದ್ದಾರೆ.

ಈ ಸಂಬಂಧ ಕಂಪನಿಯ ಜೊತೆ ಎರಡು ಬಾರಿ ಬೀಡಿ ಕಾರ್ಮಿಕ ಸಂಘದ ಮುಖಂಡರು, ಬೀಡಿ ಗುತ್ತಿಗೆದಾರರು, ಕಂಪನಿಯ ಮಾಲಕರು ನಡೆಸಿದ ಮಾತುಕತೆ ವಿಫಲವಾಗಿದೆ. ಇದರಿಂದಾಗಿ ಬೀಡಿ ಕಾರ್ಮಿಕರಿಗೆ ಕೆಲಸ ಇಲ್ಲದೇ ಸಂಸಾರಗಳು ಬೀದಿಪಾಲಾಗುವ ಸ್ಥಿತಿಯು ಇದೆ. ಆದ್ದರಿಂದ ಈ ಕೂಡಲೇ ಕಾರ್ಮಿಕ ಅಧಿಕಾರಿಗಳು ಮಧ್ಯಪ್ರವೇಶಿಸಿ ಕಾರ್ಮಿಕರಿಗೆ ಕೆಲಸ ಕೊಡಿಸಬೇಕು ಹಾಗೂ ರಾಜಾದಿನದ ವೇತನ, ಪರಿಹಾರ ಸೀಗಬೇಕು ಎಂದು ನಿಯೋಗ ಮನವಿಯಲ್ಲಿ ಒತ್ತಾಯಿಸಿದೆ.

ನಿಯೋಗದಲ್ಲಿ ಉಡುಪಿ ಬೀಡಿ ಟೋಬ್ಯಾಕೋ ಲೇಬರ್ ಯೂನಿಯನ್ ಅಧ್ಯಕ್ಷೆ ನಳಿನಿ. ಎಸ್., ಪ್ರಧಾನ ಕಾರ್ಯದರ್ಶಿ ಉಮೇಶ್ ಕುಂದರ್, ಕುಂದಾಪುರ ತಾಲೂಕು ಬೀಡಿ ಕಾರ್ಮಿಕರ ಸಂಘದ ಅಧ್ಯಕ್ಷ ಬಲ್ಕೀಸ್ ಬಾನು, ಪ್ರಧಾನ ಕಾರ್ಯದರ್ಶಿ ಮಹಾಬಲಹೋಡೆಯರ ಹೋಬಳಿ, ಕಾರ್ಕಳ ತಾಲೂಕು ಬೀಡಿ ಕಾರ್ಮಿಕ ಸಂಘದ ಅಧ್ಯಕ್ಷ ಸುನೀತ ಶೆಟ್ಟಿ, ಪ್ರಧಾನ ಕಾರ್ಯ ದರ್ಶಿ ಕವಿರಾಜ್ ಎಸ್., ಸಿಐಟಿಯು ಉಡುಪಿ ಜಿಲ್ಲಾ ಖಜಾಂಚಿ ಶಶಿಧರ ಗೊಲ್ಲ ಮೊದಲಾದವರು ಉಪಸ್ಥಿತರಿದ್ದರು.

Similar News