​ಸಂಘಟಿತ ಹೋರಾಟದಿಂದ ಸರಕಾರಿ ಸೌಲಭ್ಯ ಅನುಷ್ಠಾನ ಸಾಧ್ಯ: ರಘು ಶೆಟ್ಟಿಗಾರ್

Update: 2023-01-30 14:03 GMT

ಉಡುಪಿ: ದೇಶದಲ್ಲಿ ನೇಕಾರ ವೃತ್ತಿ ಮಾಡುವವರಿಗೆ ಸರಕಾರ ನೀಡಿರುವ ಯೋಜನೆಗಳ ಲಾಭ ಪಡೆದುಕೊಳ್ಳಲು ನೇಕಾರ ಸಮುದಾಯಗಳು ಸಂಘಟಿತವಾಗಿ ಹೋರಾಡಿ ಸರಕಾರಗಳ ಗಮನ ಸೆಳೆಯ ಬೇಕಾಗಿದೆ ಎಂದು ರಾಜ್ಯ ನೇಕಾರ ಸಮುದಾಯಗಳ ಒಕ್ಕೊಟದ ಕಾರ್ಯಾಧ್ಯಕ್ಷ ರಘು ಶ್ರೀನಿವಾಸ್ ಶೆಟ್ಟಿಗಾರ್ ಹೇಳಿದ್ದಾರೆ.

ಉಡುಪಿ ಪದ್ಮಶಾಲಿ ನೇಕಾರ ಪ್ರತಿಷ್ಠಾನದ ಆಶ್ರಯದಲ್ಲಿ ರವಿವಾರ ಉಡುಪಿ ಕಿನ್ನಿಮೂಲ್ಕಿ ಶ್ರೀವೀರಭದ್ರ ದೇವಸ್ಥಾನದ ಸಭಾಂಗಣದಲ್ಲಿ ಹಾಲಿ, ಮಾಜಿ ಹಾಗೂ ಭವಿಷ್ಯದ ನೇಕಾರರ ಸಮ್ಮಿಲನ, ವಿಚಾರ ಸಂಕಿರಣ ಮತ್ತು ಗೌರವಾರ್ಪಣೆ ‘ಯಶೋಗಾಥೆಗೊಂದು ಮುನ್ನುಡಿ -2023’ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕಾರ್ಯಕ್ರಮವನ್ನು ಉಡುಪಿ ಕಿನ್ನಿಮುಲ್ಕಿ ಶ್ರೀವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಪ್ರಭಾಶಂಕರ್ ಪದ್ಮಶಾಲಿ ಉದ್ಘಾಟಿಸಿದರು. ಉಡುಪಿ ಪ್ರಾಥಮಿಕ ನೇಕಾರ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಯ ಸದಸ್ಯ ರಾದ ಗೀತಾ ಕೇಶವ್ ಶೆಟ್ಟಿಗಾರ್, ದೇವರಾಯ ಶೆಟ್ಟಿಗಾರ್, ಪ್ರೇಮಾನಂದ ಶೆಟ್ಟಿಗಾರ್, ಭಾರತಿ ಶೆಟ್ಟಿಗಾರ್, ಮಂಜುನಾಥ್ ಶೆಟ್ಟಿಗಾರ್, ಯಶೋಧ ಎಲ್ ಶೆಟ್ಟಿಗಾರ್, ಪಾಂಡುರಂಗ ಶೆಟ್ಟಿಗಾರ್, ಮಂಜುನಾಥ್ ಮಣಿಪಾಲ, ಕೇಶವ ಶೆಟ್ಟಿಗಾರ್ ಅವರನ್ನು ಅಭಿನಂದಿಸಲಾಯಿತು.

ಹಿರಿಯ ನ್ಯಾಯವಾದಿಗಳಾದ ಕೀರ್ತಿಶೇಷ ವಿಠ್ಠಲ್ ಶೆಟ್ಟಿಗಾರ್ ರವರಿಗೆ ಪದ್ಮಶಾಲಿ ಅನರ್ಘ್ಯ್ನ ರತ್ನ ಮತ್ತು ಸಾಯಿರಾಂ ಟೆಸ್ಟೋರಿಯಂ ಸ್ಥಾಪಕ ಕೀರ್ತಿಶೇಷ ಸಂಜೀವ್ ಶೆಟ್ಟಿಗಾರ್ ಅವರಿಗೆ ಪದ್ಮಶಾಲಿ ನೇಕಾರ ಭೂಷಣ ಪ್ರಶಸ್ತಿ ಯನ್ನು ಮರಣೋತ್ತರವಾಗಿ ನೀಡಲಾಯಿತು.

ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ಸಾಧಕರಾದ ಜಯರಾಮ್ ಮಂಗಳೂರು, ರಾಹುಲ್ ಶೆಟ್ಟಿಗಾರ್ ಪರ್ಕಳ, ಮಹೇಶ್ ಶೆಟ್ಟಿಗಾರ್ ಕಾರ್ಕಳ ಅವರನ್ನು ಸನ್ಮಾನಿಸಲಾಯಿತು. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ವಕ್ವಾಡಿ ಕರುಣಾಕರ್ ಶೆಟ್ಟಿಗಾರ್ ಅವರಿಗೆ ಪದ್ಮಶಾಲಿ ಶೌರ್ಯ ಕೇಸರಿ ಪ್ರಶಸ್ತಿ ಪ್ರಧಾನ ಮಾಡ ಲಾಯಿತು. ಹಿರಿಯ ನೇಕಾರರಾದ ಸಂಜೀವ ಶೆಟ್ಟಿಗಾರ್, ವಾಮನ್ ಶೆಟ್ಟಿಗಾರ್, ಶ್ರೀನಿವಾಸ್ ಶೆಟ್ಟಿಗಾರ್ ಮತ್ತು ರಾಘವ ಪದ್ಮಶಾಲಿ ಅವರನ್ನು ಗೌರವಿಸಲಾಯಿತು.

ಪ್ರತಿಷ್ಠಾನದ ಅಧ್ಯಕ್ಷ ರತ್ನಾಕರ್ ಇಂದ್ರಾಳಿ ಅಧ್ಯಕ್ಷತೆ ವಹಿಸಿದ್ದರು. ನೇಕಾರ ಪ್ರಮುಖರಾದ ಓಂಪ್ರಕಾಶ್ ಡಿ.ಶೆಟ್ಟಿಗಾರ್ ಸುರತ್ಕಲ್, ಡಾ.ಮನೋಹರ್ ಬೋಳೂರು, ಶೋಭಾ ಜ್ಯೋತಿಪ್ರಸಾದ್, ಸತೀಶ್ ಶೆಟ್ಟಿಗಾರ್ ಅತ್ರಾಡಿ, ಸೀತಾರಾಮ್ ಶೆಟ್ಟಿಗಾರ್ ಬೆಳ್ಳಂಪಳ್ಳಿ, ಮಾಧವ ಶೆಟ್ಟಿಗಾರ್ ಕೆರೆಕಾಡು, ಡಾ. ಶಿವಪ್ರಸಾದ್, ವಿಶ್ವನಾಥ್ ಶೆಟ್ಟಿಗಾರ್ ದೇರೆಬೈಲ್, ದತ್ತರಾಜ್ ಶೆಟ್ಟಿಗಾರ್, ಸರೋಜಾ ಶೆಟ್ಟಿಗಾರ್, ನರೇಂದ್ರ ಶೆಟ್ಟಿಗಾರ್ ಉಪಸ್ಥಿತರಿದ್ದರು.

ಅವಿನಾಶ್ ಮಾರ್ಪಳ್ಳಿ  ಸ್ವಾಗತಿಸಿದರು. ಧನಂಜಯ್ ಕಳತ್ತೂರು ವಂದಿಸಿ ದರು. ನಾಗರಾಜ್ ಕಿನ್ನಿಮೂಲ್ಕಿ ಮತ್ತು ಮಮತಾ ರೂಪೇಶ್ ನಿರೂಪಿಸಿದರು. ಕೈ ಮಗ್ಗ ಸೀರೆಗಳ ಸ್ಪರ್ಧೆ, ಪ್ರದರ್ಶನ ಮತ್ತು ಮಾರಾಟ, ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ, ಚರಕದಲ್ಲಿ ನೂಲು ಸುತ್ತುವ ಸ್ಪರ್ಧೆ, ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

Similar News