ನಮಗೆ ಪ್ರಶ್ನೆ ಕೇಳಲು ಹಕ್ಕಿದೆ, ಅದಾನಿ ಸಮೂಹದೊಂದಿಗೆ ಮಾತನಾಡುತ್ತೇವೆ: ಎಲ್‌ಐಸಿ ಆಡಳಿತ ನಿರ್ದೇಶಕ
Update: 2023-01-30 20:29 IST
ಹೊಸದಿಲ್ಲಿ: ಅಮೆರಿಕಾದ ಹಿಂಡೆನ್‌ಬರ್ಗ್ ರಿಸರ್ಚ್ ಸಂಸ್ಥೆಯು ಭಾರತದ ಅದಾನಿ ಗ್ರೂಪ್ ವಿರುದ್ಧ ಹಲವು ಅವ್ಯವಹಾರಗಳ ಆರೋಪ ಹೊರಿಸಿ ಹೊರತಂದಿರುವ ವರದಿ ಭಾರೀ ಕೋಲಾಹಲ ಸೃಷ್ಟಿಸಿರುವ ನಡುವೆ ಲೈಫ್ ಇನ್ಶೂರೆನ್ಸ್ ಕಾರ್ಪೊರೇಷನ್ ತಾನು ಅದಾನಿ ಆಡಳಿತದೊಂದಿಗೆ ಮಾತುಕತೆ ನಡೆಸುವುದಾಗಿ ಹೇಳಿದೆ.
"ಪ್ರಸ್ತುತ ಸನ್ನಿವೇಶವನ್ನು ಗಮನಿಸಿದಾಗ, ನಿಜವಾದ ಸ್ಥಿತಿಗತಿ ಏನೆಂಬುದರ ಬಗ್ಗೆ ನಮಗೆ ಖಚಿತತೆಯಿಲ್ಲ.... ನಾವು ದೊಡ್ಡ ಹೂಡಿಕೆದಾರರಾಗಿರುವುದರಿಂದ ಸಂಬಂಧಿತ ಪ್ರಶ್ನೆಗಳನ್ನು ಕೇಳಲು ನಮಗೆ ಹಕ್ಕಿದೆ ಹಾಗೂ ನಾವು ಖಂಡಿತಾ ಅವರೊಂದಿಗೆ ಮಾತನಾಡಲಿದ್ದೇವೆ," ಎಂದು ಎಲ್‌ಐಸಿ ಆಡಳಿತ ನಿರ್ದೇಶಕ ರಾಜ್ ಕುಮಾರ್ ಅವರು ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.