×
Ad

ಹೊಸ ತೆರಿಗೆ ಪದ್ದತಿಯಲ್ಲಿ ಆದಾಯ ತೆರಿಗೆ ರಿಯಾಯಿತಿ ಮಿತಿ 5 ಲಕ್ಷದಿಂದ 7 ಲಕ್ಷಕ್ಕೆ ಹೆಚ್ಚಳ

Update: 2023-02-01 12:51 IST

ಹೊಸದಿಲ್ಲಿ: ಹೊಸ ತೆರಿಗೆ ಪದ್ಧತಿಯಲ್ಲಿ ಆದಾಯ ತೆರಿಗೆ ರಿಯಾಯಿತಿ ಮಿತಿಯನ್ನು 5 ಲಕ್ಷದಿಂದ 7 ಲಕ್ಷಕ್ಕೆ ಹೆಚ್ಚಿಸುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ಲೋಕಸಭೆಯಲ್ಲಿ  2023-24ರ ಬಜೆಟ್ ಮಂಡನೆಯಲ್ಲಿ ಘೋಷಿಸಿದ್ದಾರೆ.

ಹೊಸ ತೆರಿಗೆ ಪದ್ಧತಿಯು  ಇನ್ನು ಮುಂದೆ ಸಾಮಾನ್ಯ ತೆರಿಗೆ ಪದ್ಧತಿಯಾಗಲಿದೆ ಎಂದು ಅವರು ಹೇಳಿದರು.

ವಿತ್ತ ಸಚಿವರು  ಹೊಸ ತೆರಿಗೆ ಪದ್ಧತಿಯಲ್ಲಿ ತೆರಿಗೆ ಹಂತಗಳ ಸಂಖ್ಯೆಯನ್ನು 7ರಿಂದ 6ಕ್ಕೆ ಇಳಿಸಿದ್ದಾರೆ. ಅವು ಕೆಳಕಂಡಂತಿವೆ:

0-3 ಲಕ್ಷ ಆದಾಯಕ್ಕೆ ತೆರಿಗೆ ಶೂನ್ಯ; 3 ಲಕ್ಷಕ್ಕಿಂತ ಹೆಚ್ಚಿನ ಆದಾಯ ಮತ್ತು 5 ಲಕ್ಷದವರೆಗೆ ಶೇ. 5 ತೆರಿಗೆ; 6 ಲಕ್ಷಕ್ಕಿಂತ ಹೆಚ್ಚಿನ ಆದಾಯ ಮತ್ತು 9 ಲಕ್ಷದವರೆಗೆ ಶೇ.10 ತೆರಿಗೆ; 12 ಲಕ್ಷಕ್ಕಿಂತ ಹೆಚ್ಚಿನ ಆದಾಯ ಹಾಗೂ  15 ಲಕ್ಷದವರೆಗಿನ ಆದಾಯಕ್ಕೆ  ಶೇ. 20 ಹಾಗೂ .  ರೂ 15 ಲಕ್ಷಕ್ಕಿಂತ ಹೆಚ್ಚಿನ ಆದಾಯಕ್ಕೆ ಶೇ. 30 ರಷ್ಟು ತೆರಿಗೆ ವಿಧಿಸಲಾಗುತ್ತದೆ.

Similar News