ಟಿಡಿಎಫ್: ಫೆ.3ರಿಂದ ಕುಂದಾಪುರದಲ್ಲಿ ಆಭರಣಗಳ ಪ್ರದರ್ಶನ

Update: 2023-02-01 17:59 GMT

ಕುಂದಾಪುರ: ಟಿಡಿಎಫ್ ಫೆ.3 ಮತ್ತು 4ರಂದು ಕುಂದಾಪುರದಲ್ಲಿ ಆಕರ್ಷಕ ಆಭರಣಗಳ ಪ್ರದರ್ಶನವನ್ನು ಆಯೋಜಿಸಿದೆ. ಕುಂದಾಪುರದ ಸಹನಾ ಕನ್ವೆನ್ಷನ್ ಸೆಂಟರ್‌ನ ಸುಮುಖ ಬ್ಯಾಂಕ್ವೆಟ್ ಹಾಲ್‌ನಲ್ಲಿ ಹಮ್ಮಿಕೊಂಡಿರುವ ಈ ಎರಡು ದಿನಗಳ ಆಭರಣ ಪ್ರದರ್ಶನವು ಮಾರುಕಟ್ಟೆಯಲ್ಲಿ ಬಹು ನಿರೀಕ್ಷಿತ ಅತ್ಯಾಕರ್ಷಕ ವಿನ್ಯಾಸಗಳ ಆಭರಣ ಗಳ ಅಪಾರ ಸಂಗ್ರಹವನ್ನು ಹೊಂದಿರಲಿದೆ ಎಂದು ಪ್ರಕಟನೆ ತಿಳಿಸಿದೆ.

ಈ ಪ್ರದರ್ಶನದ ಮೂಲಕ ಟಿಡಿಎಫ್, ಬೆರಗುಗೊಳಿಸುವ ವಿನ್ಯಾಸಗಳು ಮತ್ತು ಆಭರಣಗಳ ಅದ್ಭುತ ಸಂಗ್ರಹವನ್ನು ಪರಿಚಯಿ ಸಲು ಸಿದ್ಧವಾಗಿದೆ. ಗ್ರಾಹಕರ ಅಪಾರ ಒತ್ತಾಯವು ಈ ಪ್ರದರ್ಶನವನ್ನು ಆಯೋಜಿಸುವಂತೆ ಮಾಡಿದೆ ಎಂದು ಹೇಳಿದೆ.

ಪ್ರದರ್ಶನವು ಅದ್ಭುತವಾದ ಮೇರು ಕೃತಿಗಳನ್ನು ಅನುಭವಿಸಲು ಈ ಪ್ರದರ್ಶನವು ಕುಂದಾಪುರದ ಎಲ್ಲೆಡೆ ಯಿಂದ ಜನರನ್ನು ಆಹ್ವಾನಿಸುತ್ತದೆ. ವಿಐಪಿ ಅತಿಥಿ ಗಳಿಗಾಗಿ ಮೀಸಲಾದ ಅವಧಿಯನ್ನು ಸಹ ನಿಗದಿಪಡಿಸಲಾಗಿದೆ. ಟಿಡಿಎಫ್ ಡೈಮಂಡ್ಸ್ ತನ್ನ ಪ್ರಮಾೀಕೃತ ವಜ್ರ ಗಳಿಗೆ ಹೆಸರುವಾಸಿಯಾಗಿದ್ದು, ಖಚಿತ ವಾದ ಬೈಬ್ಯಾಕ್ ಕೊಡುಗೆಗಳು ಮತ್ತು ಬಿಐಎಸ್ ಹಾಲ್‌ಮಾರ್ಕ್ ಪ್ರಮಾೀ ಕರಣಗಳೊಂದಿಗೆ ಪ್ರಮಾಣಿತ ಆಭರಣಗಳಾಗಿವೆ. ಇದು ನಿರಂತರವಾಗಿ ಚಿನ್ನಕ್ಕೆ ನ್ಯಾಯಯುತ ಮತ್ತು ನೈಜ್ಯ ವಿನಿ ಮಯ ಮೌಲ್ಯವನ್ನು ಒದಗಿಸುತ್ತದೆ ಹಾಗೂ ಇದು ಅತ್ಯಂತ ವಿಶ್ವಾಸಾರ್ಹವಾಗಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

ಹಾಲಿ ಚಾಲ್ತಿಯಲ್ಲಿರುವ ಮದುವೆಯ ಸೀಸನ್‌ಗಾಗಿ ಮತ್ತು ಮಾರುಕಟ್ಟೆಯ ಪ್ರಸಕ್ತ ಮನಸ್ಥಿತಿಯನ್ನು ಪೂರೈಸಬಲ್ಲಂತಹ ವಿವಿಧ ಆಭರಣ ಗಳನ್ನು ಈ ಪ್ರದರ್ಶನ ಹೊಂದಿ ರಲಿದೆ. ಅದ್ಭುತವಾಗಿ ರಚಿಸಲಾದ ಆಭರಣಗಳನ್ನು ಹೊಂದಿದ ‘ಟಿಡಿಎಫ್ ತಮನ್ನಾ’ ಸಂಗ್ರಹ, ಅಗಾಧ ಮದುವೆಯ ಸೀಸನ್‌ಗಾಗಿ ಟಿಡಿಎಫ್‌ನ ‘ಬ್ರೈಡ್ಸ್ ಪ್ರೈಡ್’ ಸಂಗ್ರಹ ಮತ್ತು ದೈನಂದಿನ ಉಡುಗೆಗಾಗಿ ‘ಟಿಡಿಎಫ್ ರೋಝಾನಾ’ ಪ್ರದರ್ಶನದ ಪ್ರಮುಖ ಹೈಲೈಟ್‌ಗಳಾಗಿರುತ್ತವೆ.

ಪ್ರದರ್ಶನದಲ್ಲಿ ‘ಫಾಯ್ದೆ ಕಾ ಸೌದಾ’ ಎಂಬ ಅತ್ಯಾಕರ್ಷಕ ಕೊಡುಗೆಗಳನ್ನು ಒಳಗೊಂಡಿರುವ ಮಳಿಗೆಯೂ ಇರಲಿದೆ. ಆಯ್ದ ಚಿನ್ನ ಮತ್ತು ಎಲ್ಲ ವಜ್ರಾ ಭರಣಗಳ ಮೇಲೆ ಶೂನ್ಯ ಮೇಕಿಂಗ್ ಶುಲ್ಕಗಳು ಎಂಬ ಅದ್ಭುತ ಕೊಡುಗೆಯನ್ನು ಇಲ್ಲಿ ಒದಗಿಸಲಾಗುತ್ತದೆ. ಇದಲ್ಲದೆ ಇನ್ನಷ್ಟು ಉತ್ತೇಜಕ ಯೋಜನೆಗಳು ಮತ್ತು ಕೊಡುಗೆಗಳು ಕೂಡಾ ಲಭ್ಯ ಇರಲಿವೆ.

ಈ ಪ್ರದರ್ಶನ ವಿಶೇಷ ಆಭರಣಗಳಿಗೆ ಸೀಮಿತವಾಗಿರದೆ, ಆಭರಣಗಳ ತಯಾರಿಕೆಯ ಕಲೆಯನ್ನು ಬಯಸುವ, ಸೂಚಿಸುವ ಮತ್ತು ಉತ್ತೇಜಿಸುವ ಎಲ್ಲರಿಗಾಗಿ ಆಯೋಜಿಸಲಾಗಿದೆ ಎಂದು ಟಿಡಿಎಫ್ ಪ್ರಕಟನೆ ತಿಳಿಸಿದೆ.

Similar News