ಥೈಲ್ಯಾಂಡ್: ವಾಯುಮಾಲಿನ್ಯ ತೀವ್ರ; ಮನೆಯಿಂದ ಹೊರಬಾರದಂತೆ ಜನರಿಗೆ ಸೂಚನೆ

Update: 2023-02-02 18:05 GMT

ಬ್ಯಾಂಕಾಕ್, ಫೆ.2: ಥೈಲ್ಯಾಂಡ್ ನ ರಾಜಧಾನಿ ಬ್ಯಾಂಕಾಕ್ ಹಾಗೂ ನೆರೆಯ ಥಾಯ್ ಪ್ರಾಂತದಲ್ಲಿ ವಾಯುಮಾಲಿನ್ಯ ತೀವ್ರ ಹೆಚ್ಚಳಗೊಂಡಿರುವುದರಿಂದ ಸಾಧ್ಯವಾದಷ್ಟು ಮಟ್ಟಿಗೆ ಹೊರಾಂಗಣ ಚಟುವಟಿಕೆಯಿಂದ ದೂರವಿದ್ದು ಮನೆಯೊಳಗೇ ಇರುವಂತೆ ಸರಕಾರ ಜನರಿಗೆ ಸಲಹೆ ನೀಡಿದೆ.

ಬ್ಯಾಂಕಾಕ್ ನಲ್ಲಿ ಪಿಎಂ2.5(ಗಾಳಿಯಲ್ಲಿರುವ ಧೂಳಿನ ಸಣ್ಣಕಣಗಳ ಪ್ರಮಾಣ) ಪ್ರಮಾಣವು ವಿಶ್ವ ಆರೋಗ್ಯ ಸಂಸ್ಥೆ ನಿಗದಿಗೊಳಿಸಿದ್ದಕ್ಕಿಂತ 14 ಪಟ್ಟು ಹೆಚ್ಚಿದ ಹಿನ್ನೆಲೆಯಲ್ಲಿ ರಾಜಧಾನಿಯ ಗಾಳಿಯ ಗುಣಮಟ್ಟ ಈಗ ವಿಶ್ವದ ಅತ್ಯಂತ ಕಳಪೆಯ ಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಕುಸಿದಿದೆ. ನಿಶ್ಚಲ ಹವಾಮಾನ ಪರಿಸ್ಥಿತಿಗಳು ಮತ್ತು ವಾಹನಗಳಿಂದ ಹೊರಸೂಸುವಿಕೆ ಪ್ರಮಾಣ ಹೆಚ್ಚಳ, ಕೃಷಿ ತ್ಯಾಜ್ಯ ಸುಡುವುದರಿಂದ ಉಂಟಾಗುವ ಮಾಲಿನ್ಯ ಈಗಿನ ಸಮಸ್ಯೆಗೆ ಕಾರಣ ಎಂದು ಥೈಲ್ಯಾಂಡ್ನ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ.

ಮಾಲಿನ್ಯ ನಿಯಂತ್ರಣಕ್ಕೆ ನಮ್ಮ ಪ್ರಯತ್ನಗಳನ್ನು ತೀವ್ರಗೊಳಿಸಿದ್ದು ಮನೆಯಿಂದಲೇ ಕೆಲಸ ಮಾಡಲು ಜನರನ್ನು ಪ್ರೋತ್ಸಾಹಿಸುತ್ತಿದ್ದೇವೆ. ಮಕ್ಕಳ ಆರೋಗ್ಯದ ಮೇಲಾಗುವ ಪರಿಣಾಮಗಳನ್ನು ತಡೆಯಲು ಶಾಲೆಗಳು ಹೊರಾಂಗಣ ಚಟುವಟಿಕೆಯನ್ನು ನಿವಾರಿಸಬೇಕಿದೆ ಎಂದು ಮಂಡಳಿಯ ಪ್ರಧಾನ ನಿರ್ದೇಶಕರು ಹೇಳಿದ್ದಾರೆ.

Similar News