ಈ ವರ್ಷ ಭಾರತದ ಹಜ್ ಕೋಟಾ: ಇಲ್ಲಿದೆ ಉಪಯುಕ್ತ ಮಾಹಿತಿ...

Update: 2023-02-03 03:18 GMT

ಹೊಸದಿಲ್ಲಿ: ಸೌದಿ ಅರೇಬಿಯಾ ಸರ್ಕಾರ ಈ ವರ್ಷ ಭಾರತಕ್ಕೆ ನಿಗದಿಪಡಿಸಿದ ಕೋಟಾ ಅಡಿಯಲ್ಲಿ 1.75 ಲಕ್ಷ ಮಂದಿ ಭಾರತೀಯರು ಪವಿತ್ರ ಹಜ್ ಯಾತ್ರೆ ಕೈಗೊಳ್ಳಬಹುದಾಗಿದೆ.

ಕೇಂದ್ರದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ವಿಶೇಷ ಆನ್‌ಲೈನ್ ಪೋರ್ಟೆಲ್‌ನಲ್ಲಿ ಹಜ್ ಅರ್ಜಿಗಳ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ.

ಸೌದಿ ಅರೇಬಿಯಾದ ಅಧಿಕಾರಿಗಳು ನಿಗದಿಪಡಿಸುವ ವೇಳಾಪಟ್ಟಿ ಮತ್ತು ಮಾರ್ಗಸೂಚಿಗೆ ಅನುಸಾರವಾಗಿ ಪ್ರತಿ ವರ್ಷದ ಮೇ ಅಥವಾ ಜೂನ್ ತಿಂಗಳಲ್ಲಿ ಹಜ್ ಯಾತ್ರಿಗಳ ಮೊದಲ ತಂಡ ಪ್ರಯಾಣ ಆರಂಭಿಸುತ್ತದೆ.

ಕೋವಿಡ್-19 ಸಾಂಕ್ರಾಮಿಕದ ಕಾರಣದಿಂದಾಗಿ ನಿರ್ಬಂಧಿಸಿದ್ದ ಹಿನ್ನೆಲೆಯಲ್ಲಿಎರಡು ವರ್ಷಗಳ ಬಳಿಕ ಭಾರತೀಯ ಹಜ್ ಯಾತ್ರಿಗಳು ಹಜ್ ಯಾತ್ರೆ ಕೈಗೊಳ್ಳಲು ಸಾಧ್ಯವಾಗಿತ್ತು. ಅದರೆ ಸಾಂಕ್ರಾಮಿಕದ ಮುಂಜಾಗ್ರತಾ ನಿರ್ಬಂಧಗಳಿಂದಾಗಿ ಭಾರತೀಯ ಕೋಟಾವನ್ನು 79 ಸಾವಿರಕ್ಕೆ ಸೀಮಿತಗೊಳಿಸಿತ್ತು. ಯಾತ್ರಿಗಳು ಅನುಸರಿಸಬೇಕಾದ ಕೋವಿಡ್-19 ಸಂಬಂಧಿ ನಿಯಮಾವಳಿಗಳನ್ನು ಸೌದಿ ಅಧಿಕಾರಿಗಳು ಬಿಡುಗಡೆ ಮಾಡಿದ್ದರು.

Similar News