×
Ad

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ , ಖ್ಯಾತ ನಿರ್ದೇಶಕ ಕೆ. ವಿಶ್ವನಾಥ್ ನಿಧನ

Update: 2023-02-03 10:02 IST

ಹೊಸದಿಲ್ಲಿ: ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಹಾಗೂ ಖ್ಯಾತ ನಿರ್ದೇಶಕ-ನಿರ್ಮಾಪಕ ಕಾಸಿನಾಧುನಿ ವಿಶ್ವನಾಥ್(Kasinadhuni Viswanath) ಗುರುವಾರ ತಡರಾತ್ರಿ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.  ಅವರಿಗೆ 92 ವರ್ಷ ವಯಸ್ಸಾಗಿತ್ತು.

ವಿಶ್ವನಾಥ್ ನಿಧನಕ್ಕೆ  ಹಲವಾರು ಗಣ್ಯರು ತಮ್ಮ ದುಃಖವನ್ನು ವ್ಯಕ್ತಪಡಿಸಿದರು.

 ಐದು ಬಾರಿ ರಾಷ್ಟ್ರೀಯ ಪ್ರಶಸ್ತಿ ವಿಜೇತರಾದ ವಿಶ್ವನಾಥ್  ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು.

ವಿಶ್ವನಾಥ್ ಅವರು 1992 ರಲ್ಲಿ ಪದ್ಮಶ್ರೀ ಗೌರವ ಹಾಗೂ 2017 ರಲ್ಲಿ ದಾದಾ ಸಾಹೇಬ್ ಫಾಲ್ಕೆ ಗೌರವವನ್ನು ಪಡೆದರು. ನಾಲ್ಕು ದಶಕಗಳ ವೃತ್ತಿಜೀವನದಲ್ಲಿ ಅವರು ಎಂಟು ಬಾರಿ ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

"ತೆಲುಗು ಸಿನಿಮಾ ಹಾಗೂ  ಕಲೆಯ ಮೇಲಿನ ನಿಮ್ಮ ಸಹಿ ಶಾಶ್ವತವಾಗಿ ಪ್ರಕಾಶಮಾನವಾಗಿ ಹೊಳೆಯುತ್ತದೆ" ಎಂದು ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಆರ್‌ಆರ್‌ಆರ್ ನಿರ್ದೇಶಕ ಎಸ್‌ಎಸ್ ರಾಜಮೌಳಿ ಬರೆದಿದ್ದಾರೆ.

"ತೆಲುಗು ಚಿತ್ರರಂಗದ ಕೀರ್ತಿಯನ್ನು ಖಂಡಗಳಾದ್ಯಂತ ಹರಡಿದವರಲ್ಲಿ ವಿಶ್ವನಾಥ್   ಉನ್ನತ ಸ್ಥಾನವನ್ನು ಹೊಂದಿದ್ದಾರೆ. ಅವರು ಶಂಕರಾಭರಣ ಹಾಗೂ  ಸಾಗರ ಸಂಗಮ್‌ನಂತಹ ಅನೇಕ ಅದ್ಭುತ ಚಲನಚಿತ್ರಗಳನ್ನು ನೀಡಿದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ" ಎಂದು ಜೂನಿಯರ್ ಎನ್ ಟಿಆರ್ ಟ್ವಿಟಿಸಿದ್ದಾರೆ.

ಬಾಲಿವುಡ್ ನಟ ಅನಿಲ್ ಕಪೂರ್, ಮಲಯಾಳಂ ನಟ ಮಮ್ಮುಟ್ಟಿ ಹಾಗೂ ಖ್ಯಾತ ಸಂಗೀತ ನಿರ್ಧೇಶಕ ಎ.ಆರ್. ರೆಹಮಾನ್ ಮತ್ತಿತರರ ಗಣ್ಣರು ವಿಶ್ವನಾಥ್ ನಿಧನಕ್ಕೆ ಶೋಕ ವ್ಯಕ್ತಪಡಿಸಿದರು.

Similar News