ಪ್ರತಿ ಲೀಟರ್ ಹಾಲಿನ ಬೆಲೆ 2 ರೂ. ಹೆಚ್ಚಿಸಿದ ಅಮುಲ್

Update: 2023-02-03 11:53 GMT

ಆನಂದ್: 'ಅಮುಲ್' ಬ್ರಾಂಡ್‌ನಲ್ಲಿ ಡೈರಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ (ಜಿಸಿಎಂಎಂಎಫ್) ಶುಕ್ರವಾರ ಗುಜರಾತ್ ಹೊರತುಪಡಿಸಿ ಎಲ್ಲಾ ಮಾರುಕಟ್ಟೆಗಳಲ್ಲಿ ಹಾಲಿನ ದರವನ್ನು ಲೀಟರ್‌ಗೆ  2  ರೂ. ಹೆಚ್ಚಿಸಿದೆ.

ಆನಂದ್ ಪ್ರಧಾನ ಕಛೇರಿಯ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಜಯನ್ ಮೆಹ್ತಾ ಮಾತನಾಡಿ, ಹಾಲಿನ ಬೆಲೆ ಏರಿಕೆ ಗುಜರಾತ್‌ಗೆ ಅನ್ವಯಿಸುವುದಿಲ್ಲ ಎಂದರು.

"ನಾವು ಗುಜರಾತ್ ಹೊರತುಪಡಿಸಿ ದಿಲ್ಲಿ, ಕೋಲ್ಕತ್ತಾ ಮತ್ತು ಮುಂಬೈಯಂತಹ ಇತರ ಮಾರುಕಟ್ಟೆಗಳಲ್ಲಿ ಪ್ರತಿ ಲೀಟರ್ ಹಾಲಿನ ದರವನ್ನು  2 ರೂ. ಹೆಚ್ಚಿಸಿದ್ದೇವೆ. ಸದ್ಯಕ್ಕೆ ಗುಜರಾತ್‌ನಲ್ಲಿ ಹಾಲಿನ ದರದಲ್ಲಿ ಯಾವುದೇ ಹೆಚ್ಚಳವಾಗಿಲ್ಲ" ಎಂದು ಅವರು ಪಿಟಿಐಗೆ ತಿಳಿಸಿದರು.

ಬೆಲೆ ಏರಿಕೆಯೊಂದಿಗೆ, ಅಮುಲ್ ತಾಜಾ ಹಾಲಿನ ಒಂದು ಲೀಟರ್ ಪೌಚ್ ಈಗ  54 ರೂ. ಆಗಿದ್ದರೆ, ಒಂದು ಲೀಟರ್ ಅಮುಲ್ ಗೋಲ್ಡ್ 66 ರೂ.ಕ್ಕೆ ಮಾರಾಟವಾಗಲಿದ್ದು, ಒಂದು ಲೀಟರ್ ಹಸುವಿನ ಹಾಲಿನ ಬೆಲೆ  56 ರೂ. ಆಗಿದೆ.  ಅಮುಲ್ ಎ2 ಎಮ್ಮೆಯ ಹಾಲಿನ ಪೌಚ್ ಶುಕ್ರವಾರದಿಂದ  70 ರೂ. ಆಗಲಿದೆ ಎಂದು ಪ್ರಕಟನೆಯೊಂದರಲ್ಲಿ ತಿಳಿಸಲಾಗಿದೆ.

Similar News