ಶಾರೂಖ್ ಖಾನ್ ರನ್ನು 'ಕಿಂಗ್, ಲೆಜೆಂಡ್, ಅತ್ಯುತ್ತಮ ನಟ' ಎಂದು ಕೊಂಡಾಡಿದ ಖ್ಯಾತ ಲೇಖಕ ಪೌಲೊ ಕೊಯ್ಲೊ

Update: 2023-02-03 08:29 GMT

ಹೊಸ ದಿಲ್ಲಿ: 'ಪಠಾಣ್' ಚಿತ್ರದ ಭಾರಿ ಯಶಸ್ಸಿನ ಬೆನ್ನಿಗೇ ಚಿತ್ರದ ನಾಯಕ ಶಾರೂಖ್ ಖಾನ್ (Shah Rukh Khan)  ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ಬ್ರೆಜಿಲ್‌ನ ಪ್ರಖ್ಯಾತ ಲೇಖಕ ಪೌಲೊ ಕೊಯ್ಲೊ (Paulo Coelho), "ಶಾರೂಖ್ ಖಾನ್ ಚಕ್ರವರ್ತಿ. ದಂತಕತೆ. ಆದರೆ, ಅವೆಲ್ಲವನ್ನೂ ಮೀರಿದ ನಟ" ಎಂದು ಕೊಂಡಾಡಿದ್ದಾರೆ.

ತಮ್ಮ ನಿವಾಸ 'ಮನ್ನತ್' ಎದುರು ಜಮಾಯಿಸಿದ್ದ ಅಭಿಮಾನಿಗಳಿಗೆ ಧನ್ಯವಾದ ಹೇಳುತ್ತಿರುವ ತಮ್ಮ ವಿಡಿಯೊವನ್ನು ಶಾರೂಖ್ ಖಾನ್ ಹಂಚಿಕೊಂಡಿದ್ದರು. ಆ ವಿಡಿಯೊವನ್ನೇ ಹಂಚಿಕೊಂಡಿರುವ 'ದ ಆಲ್‌ಕೆಮಿಸ್ಟ್' ಕಾದಂಬರಿಯ ಲೇಖಕ ಪೌಲೊ ಕೊಯ್ಲೊ, ಪಾಶ್ಚಿಮಾತ್ಯ ದೇಶಗಳಲ್ಲಿ ಇವರ ಬಗ್ಗೆ ಯಾರಿಗೆ ತಿಳಿದಿಲ್ಲವೊ ಅವರಿಗೆ ಶಾರೂಖ್ ಖಾನ್ ಅವರ, "ಮೈ ನೇಮ್‌ ಇಸ್‌ ಖಾನ್‌, ಐಯಾಮ್‌ ನಾಟ್‌ ಟೆರರಿಸ್ಟ್" ಎಂಬ ಪ್ರಖ್ಯಾತ ಸಿನಿಮಾ ಮತ್ತು ಮಾತನ್ನು ನೆನಪಿಸಲು ಬಯಸುತ್ತೇನೆ ಎಂದೂ ಹೇಳಿದ್ದಾರೆ.

ಪೌಲೊ ಕೊಯ್ಲೊ ಇದೇ ಮೊದಲ ಬಾರಿಯೇನೂ ಶಾರೂಖ್ ಖಾನ್ ಬೆಂಬಲಕ್ಕೆ ನಿಂತಿರುವುದಲ್ಲ. 2017ರಲ್ಲೂ ಕೂಡಾ, "ಹಾಲಿವುಡ್ ಮೋಸವೆಸಗದಿದ್ದರೆ ಶಾರೂಖ್ ಖಾನ್ ಹಾಲಿವುಡ್‌ನ ಆಸ್ಕರ್ ಪ್ರಶಸ್ತಿ ಪಡೆಯಲು ಅರ್ಹರಾಗಿದ್ದಾರೆ" ಎಂದು ಹೇಳಿಕೆ ನೀಡಿದ್ದರು. 

ಇದನ್ನೂ ಓದಿ: ಪ್ರತಿ ಲೀಟರ್ ಹಾಲಿನ ಬೆಲೆ 2 ರೂ. ಹೆಚ್ಚಿಸಿದ ಅಮುಲ್, ಗುಜರಾತ್‌ಗೆ ಅನ್ವಯಿಸುವುದಿಲ್ಲ 

Similar News