ಅದಾನಿ ಸಂಸ್ಥೆಗಳ ಒಟ್ಟು ಮೌಲ್ಯವನ್ನು ಅರ್ಧದಷ್ಟು ಕುಸಿಯುವಂತೆ ಮಾಡಿದ ಹಿಂಡೆನ್‌ಬರ್ಗ್‌ ವರದಿ

Update: 2023-02-03 12:13 GMT

ಹೊಸದಿಲ್ಲಿ : ಗೌತಮ್‌ ಅದಾನಿ ಒಡೆತನದ ಅದಾನಿ ಸಂಸ್ಥೆಗಳ ಷೇರು ಮೌಲ್ಯ ಇಂದು ಕೂಡ ಇಳಿಮುಖ ಕಂಡಿದ್ದು ಬೆಳಿಗ್ಗಿನ ಟ್ರೇಡಿಂಗ್‌ ಸೆಷನ್‌ನಲ್ಲಿ ಅವುಗಳ ಮಾರ್ಕೆಟ್‌ ಕ್ಯಾಪ್‌ ರೂ 10 ಲಕ್ಷ ಕೋಟಿಗಿಂತ ಕೆಳಗೆ ಅಂದರೆ ಜನವರಿ 24 ರಲ್ಲಿದ್ದಂತೆ ಅವುಗಳ ಒಟ್ಟು ಮೌಲ್ಯದ ಅರ್ಧಕ್ಕಿಂತ ಹೆಚ್ಚು ಇಳಿಕೆಯಾಗಿವೆ. ಅಂದರೆ ಹಿಂಡೆನ್‌ಬರ್ಗ್‌ ರಿಸರ್ಚ್‌ ಸಂಸ್ಥೆಯು ಅದಾನಿ ಸಂಸ್ಥೆಗಳಲ್ಲಿ ಅವ್ಯವಹಾರಗಳು ನಡೆದಿವೆ ಎಂದು ಆರೋಪಿಸಿ ವರದಿ ಹೊರತರುವುದಕ್ಕೆ ಮುಂಚೆ ಅದಾನಿ ಸಂಸ್ಥೆಗಳ ಸ್ಟಾಕ್‌ ಮಾರ್ಕೆಟ್‌ ಕ್ಯಾಪ್‌ ರೂ 16 ಲಕ್ಷ ಕೋಟಿಗಿಂತ ಹೆಚ್ಚಾಗಿತ್ತು.

ಗುರುವಾರ ಅದಾನಿ ಎಂಟರ್‌ಪ್ರೈಸಸ್‌ ಷೇರುಗಳು ಶೇ 25 ರಷ್ಟು ಕುಸಿದಿವೆ. ಎಸ್‌ & ಪಿ ಡೌ ಜೋನ್ಸ್‌ ಇಂಡಿಸಸ್‌ ತಾನು ಅದಾನಿ ಎಂಟರ್‌ಪ್ರೈಸಸ್‌ ಅನ್ನು ವ್ಯಾಪಕವಾಗಿ ಬಳಕೆಯಾಗುವ ತನ್ನ ಸುಸ್ಥಿರತೆ ಸೂಚ್ಯಂಕಗಳಿಂದ ಫೆಬ್ರವರಿ 7 ರಿಂದ ತೆಗೆದು ಹಾಕುವುದಾಗಿ ತಿಳಿಸಿರುವುದು ಸಂಸ್ಥೆಗೆ ಇನ್ನೊಂದು ಆಘಾತ ನೀಡಿದೆ.

ಅದಾನಿ ಪೋರ್ಟ್ಸ್‌ ಮತ್ತು ಸ್ಪೆಷಲ್‌ ಇಕನಾಮಿಕ್‌ ಝೋನ್‌ ಷೇರು ಮೌಲ್ಯ ಶೇ 14 ರಷ್ಟು ಕುಸಿತ ಕಂಡಿದ್ದರೆ, ಅದಾನಿ ಟ್ರಾನ್ಸ್‌ಮಿಷನ್‌ ಮತ್ತು ಅದಾನಿ ಗ್ರೀನ್‌ ಎನರ್ಜಿ ತಲಾ ಶೇ 10 ಹಾಗೂ ಅದಾನಿ ಟೋಟಲ್‌ ಗ್ಯಾಸ್‌ ಶೇ 5 ರಷ್ಟು ಕುಸಿತ ಕಂಡಿದೆ.

ನ್ಯಾಷನಲ್‌ ಸ್ಟಾಕ್‌ ಎಕ್ಸ್‌ಚೇಂಜ್‌ ಅದಾನಿ ಸಂಸ್ಥೆಯ ಮೂರು ಸ್ಟಾಕ್‌ಗಳು- ಅದಾನಿ ಎಂಟರ್‌ಪ್ರೈಸಸ್‌, ಅದಾನಿ ಪೋರ್ಟ್ಸ್‌  ಮತ್ತು ಅಂಬುಜಾ ಸಿಮೆಂಟ್‌ ಇವುಗಳ ಮೇಲೆ ಹೆಚ್ಚುವರಿ ನಿಗಾ (ಎಎಸ್‌ಎಂ) ವಹಿಸಲು ನಿರ್ಧರಿಸಿರುವುದೂ ಸಂಸ್ಥೆಯ ಷೇರುದಾರರನ್ನು ಕಂಗೆಡಿಸಿದೆ.

Similar News