ಅದಾನಿ ಗ್ರೂಪ್ ವಿರುದ್ಧ ಆರೋಪದ ತನಿಖೆಗೆ ವಿಪಕ್ಷಗಳ ಬಿಗಿ ಪಟ್ಟು: ಲೋಕಸಭೆ ಕಲಾಪ ಫೆ.6ಕ್ಕೆ ಮುಂದೂಡಿಕೆ

Update: 2023-02-03 08:56 GMT

ಹೊಸದಿಲ್ಲಿ: ಅದಾನಿ ಗ್ರೂಪ್ ವಿರುದ್ಧ ಅಮೆರಿಕದ ಹೂಡಿಕೆ ಸಂಸ್ಥೆ ಹಿಂಡೆನ್‌ಬರ್ಗ್ ಮಾಡಿರುವ  ಆರೋಪಗಳ ಕುರಿತು ಸುಪ್ರೀಂ ಕೋರ್ಟ್ ಅಥವಾ ಜಂಟಿ ಸಂಸದೀಯ ಸಮಿತಿಯ ಮೇಲ್ವಿಚಾರಣೆಯಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸಿ ಶುಕ್ರವಾರ ಸಂಸತ್ ಅಧಿವೇಶನದಲ್ಲಿ ಮತ್ತೆ ಗದ್ದಲ ಎಬ್ಬಿಸಿದ ಹಿನ್ನೆಲೆಯಲ್ಲಿ ಲೋಕಸಭೆ ಕಲಾಪವನ್ನು ಫೆಬ್ರವರಿ 6ರ ತನಕ ಮುಂದೂಡಲಾಗಿದೆ.

ಸಂಸತ್ತಿನಲ್ಲಿ ತಮ್ಮ ಕಾರ್ಯತಂತ್ರವನ್ನು ಸಂಘಟಿಸಲು ಕನಿಷ್ಠ 16 ವಿರೋಧ ಪಕ್ಷಗಳು ಶುಕ್ರವಾರ ಬೆಳಿಗ್ಗೆ ಸಭೆ ಸೇರಿದ್ದವು ಮತ್ತು ಅದಾನಿ ಸ್ಟಾಕ್ ರೂಟ್ ವಿಷಯದ ಬಗ್ಗೆ ತಕ್ಷಣ ಚರ್ಚೆಗೆ ಒತ್ತಾಯಿಸಿ ಸರಕಾರದ ಮೇಲಿನ ದಾಳಿಯನ್ನು ಹೆಚ್ಚಿಸಲು ನಿರ್ಧರಿಸಿದವು.

ಸಂಸತ್ತಿನ ಬಜೆಟ್ ಅಧಿವೇಶನವು ಜನವರಿ 31 ರಂದು ಆರಂಭವಾಗಿದ್ದು,ಎಪ್ರಿಲ್ 6 ರವರೆಗೆ 66 ದಿನಗಳ ಕಾಲ ಸಾಮಾನ್ಯ ವಿರಾಮದೊಂದಿಗೆ ಮುಂದುವರಿಯುತ್ತದೆ.

Similar News