ಭಾರತದ ಗಡಿಯೊಳಗೆ ನುಸುಳಿದ ಪಾಕ್ ಡ್ರೋನ್, ಹೊಡೆದುರುಳಿಸಿದ ಬಿಎಸ್ ಎಫ್

Update: 2023-02-03 09:07 GMT

ಅಮೃತಸರ: ದೇಶದ ಗಡಿಯೊಳಗೆ ನುಸುಳಿದ್ದ ಪಾಕಿಸ್ತಾನದ ಡ್ರೋನ್ ಅನ್ನು ಗಡಿ ಭದ್ರತಾ ಪಡೆ(ಬಿಎಸ್ ಎಫ್) ಹೊಡೆದುರುಳಿಸಿದೆ ಎಂದು ಹಿರಿಯ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಪಂಜಾಬ್ ನಲ್ಲಿರುವ ಅಂತರ್ ರಾಷ್ಟ್ರೀಯ ಗಡಿ ರೇಖೆ ಮೂಲಕ ಡ್ರೋನ್ ಭಾರತದತ್ತ ಬಂದಿತ್ತು.

ಪಂಜಾಬ್ ನ  ಅಮೃತಸರ ಸೆಕ್ಟರ್ ನ ಗಡಿ ಪೋಸ್ಟ್ ಹಿಂಭಾಗದಲ್ಲಿ ಮುಂಜಾನೆ 2:30ರ ಸುಮಾರಿಗೆ ಡ್ರೋನ್ ಅನ್ನು ಹೊಡೆದುರುಳಿಸಲಾಗಿದೆ. ಗಡಿಯಲ್ಲಿರುವ ತಂತಿ ಬೇಲಿ ಬಳಿ ಡ್ರೋನ್ ಹಾಗೂ ಅದರಲ್ಲಿದ್ದ ಶಂಕಿತ ನಿಷೇಧಿತ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬಿಎಸ್ ಎಫ್ ವಕ್ತಾರರು ತಿಳಿಸಿದ್ದಾರೆ.

Similar News