ನ್ಯುಮೋನಿಯಾದಿಂದ ಬಳಲುತ್ತಿದ್ದ ಮಗುವಿಗೆ ನಕಲಿ ವೈದ್ಯನಿಂದ ಕಬ್ಬಿಣದ ರಾಡಿನಿಂದ ಬರೆ; ಮಗು ಸಾವು

Update: 2023-02-04 09:28 GMT

ಭೋಪಾಲ್:‌ ಮಧ್ಯ ಪ್ರದೇಶದ ಶಹದೋಲ್‌ ಜಿಲ್ಲೆಯ ಆದಿವಾಸಿ ಪ್ರದೇಶದಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ನ್ಯುಮೋನಿಯಾದಿಂದ ಬಳಲುತ್ತಿದ್ದ ಮೂರು ತಿಂಗಳ ಹೆಣ್ಣು ಮಗುವನ್ನು ಗುಣಪಡಿಸುವ ನೆಪದಲ್ಲಿ ಅದರ ಹೊಟ್ಟೆಗೆ 51 ಬಾರಿ ನಕಲಿ ವೈದ್ಯನೊಬ್ಬ ಬರೆ ಎಳೆದ ಪರಿಣಾಮ ಮಗು  15 ದಿನಗಳ ನಂತರ ಆಸ್ಪತ್ರೆಯಲ್ಲಿ ಮೃತಪಟ್ಟಿದೆ.

ಮಗುವಿನ ಮೃತದೇಹವನ್ನು ಅದಾಗಲೇ ಹೂಳಲಾಗಿದೆಯೆಂದು ಪೊಲೀಸರು ತಿಳಿಸಿದ್ದು ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗುವುದೆಂದು ತಿಳಿದು ಬಂದಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿದ್ದ ಸಂದರ್ಭ 15 ದಿನಗಳ ಹಿಂದೆ ನಡೆದ ಘಟನೆ ಅವರ ಗಮನಕ್ಕೆ ಬಂದಿತ್ತು. ನ್ಯುಮೋನಿಯಾದಿಂದ ಬಳಲುತ್ತಿದ್ದ ಮಗುವಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ದೊರಕದೇ ಇದ್ದುದರಿಂದ ಅದರ ಪರಿಸ್ಥಿತಿ ಬಿಗಡಾಯಿಸಿತ್ತು ಎಂದು ಶಹದೋಲ್‌ ಜಿಲ್ಲಾ ಕಲೆಕ್ಟರ್‌ ವಂದನಾ ವೈಧ್‌ ಹೇಳಿದ್ದಾರೆ.

ಮಗುವಿನ ಸ್ಥಿತಿಯನ್ನು ಕಂಡ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಮಗುವಿನ ತಾಯಿಗೆ ತಿಳಿ ಹೇಳಿದ ನಂತರ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಮಧ್ಯ ಪ್ರದೇಶದ  ಹಲವು ಆದಿವಾಸಿ ಪ್ರದೇಶಗಳಲ್ಲಿ ನ್ಯುಮೋನಿಯಾ ಚಿಕಿತ್ಸೆಗೆ ಕಬ್ಬಿಣದ ರಾಡಿನಿಂದ ಬರೆ ಎಳೆಯುವ ಪದ್ಧತಿಯಿದೆ.

ಇದನ್ನೂ ಓದಿ: ರ್‍ಯಾಪ್ ಪ್ರದರ್ಶನದ ಆಕಾಂಕ್ಷಿಗಳಾಗಿದ್ದ ಮೂವರು ವಾರಗಳ ನಾಪತ್ತೆಯ ನಂತರ ಶವವಾಗಿ ಪತ್ತೆ

Similar News