ಸುಪ್ರೀಂ ಕೋರ್ಟ್‌ಗೆ ಐವರು ನ್ಯಾಯಾಧೀಶರ ನೇಮಕ: ಕೇಂದ್ರದಿಂದ ಅಧಿಸೂಚನೆ

Update: 2023-02-04 18:36 GMT

ಹೊಸದಿಲ್ಲಿ, ಫೆ.4: ಕೇಂದ್ರ ಸರಕಾರವು ಸರ್ವೋಚ್ಚ ನ್ಯಾಯಾಲಯಕ್ಕೆ ಐವರು ನೂತನ ನ್ಯಾಯಾಧೀಶರನ್ನು ನೇಮಕಗೊಳಿಸಿ ಶನಿವಾರ ಅಧಿಸೂಚನೆಯನ್ನು ಹೊರಡಿಸಿದೆ. ಈ ನೇಮಕಾತಿಗಳೊಂದಿಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ನ್ಯಾಯಾಧೀಶರ ಸಂಖ್ಯೆ 32ಕ್ಕೆ ಹೆಚ್ಚಲಿದೆ. ನ್ಯಾಯಾಲಯವು 34 ನ್ಯಾಯಾಧೀಶರ ಮಂಜೂರಾದ ಹುದ್ದೆಗಳನ್ನು ಹೊಂದಿದೆ.

ರಾಜಸ್ಥಾನ ಹೈಕೋರ್ಟಿನ ಮುಖ್ಯ ನ್ಯಾಯಾಧೀಶ ಪಂಕಜ ಮಿತ್ತಲ್,ಪಾಟ್ನಾ ಹೈಕೋರ್ಟ್ನ ಮುಖ್ಯ ನ್ಯಾಯಾಧೀಶ ಸಂಜಯ ಕರೋಲ್,ಮಣಿಪುರ ಹೈಕೋರ್ಟ್ನ ಮುಖ್ಯ ನ್ಯಾಯಾಧೀಶ ಪಿ.ವಿ.ಸಂಜಯ್ ಕುಮಾರ್, ಪಾಟ್ನಾ ಹೈಕೋರ್ಟಿನ ನ್ಯಾ.ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ಅಲಹಾಬಾದ್ ಹೈಕೋರ್ಟಿನ ನ್ಯಾ.ಮನೋಜ್ ಮಿಶ್ರಾ ಅವರು ಸರ್ವೋಚ್ಚ ನ್ಯಾಯಾಲಯಕ್ಕೆ ಹೊಸದಾಗಿ ಪದೋನ್ನತಿಗೊಂಡಿರುವ ನ್ಯಾಯಾಧೀಶರಾಗಿದ್ದಾರೆ.

ನ್ಯಾಯಾಧೀಶರ ನೇಮಕಾತಿಗಳಲ್ಲಿ ವಿಳಂಬಕ್ಕಾಗಿ ಸರ್ವೋಚ್ಚ ನ್ಯಾಯಾಲಯವು ಕೇಂದ್ರವನ್ನು ತರಾಟೆಗೆತ್ತಿಕೊಂಡ ಮರುದಿನವೇ ಈ ಅಧಿಸೂಚನೆ ಹೊರಬಿದ್ದಿದೆ. ನ್ಯಾಯಾಲಯವು ನೇಮಕಾತಿ ಆದೇಶಗಳನ್ನು ಹೊರಡಿಸಲು ಕೇಂದ್ರಕ್ಕೆ 10 ದಿನಗಳ ಗಡುವು ನೀಡಿತ್ತು.

Similar News