ಚಿಲಿ: ಭೀಕರ ಕಾಡ್ಗಿಚ್ಚಿಗೆ 23 ಬಲಿ

Update: 2023-02-05 17:42 GMT

ಸ್ಯಾಂಟಿಯಾಗೊ,ಫೆ.5: ಚಿಲಿಯ ದಕ್ಷಿಣ ಹಾಗೂ ಕೇಂದ್ರ ಭಾಗಗಳಲ್ಲಿ ತೀವ್ರ ಉಷ್ಣ ಮಾರುತದಿಂದಾಗಿ ಉಂಟಾಗಿರುವ ಭೀಕರ ಕಾಡ್ಗಿಚ್ಚಿಗೆ ಸಿಲುಕಿ ಕನಿಷ್ಠ 23 ಮಂದಿ ಸಾವನ್ನಪ್ಪಿದ್ದಾರೆ ಹಾಗೂ 978 ಮಂದಿ ಗಾಯಗೊಂಡಿದ್ದಾರೆಂದು ಗೃಹ ಸಚಿವ ಮ್ಯಾನುಯೆಲ್ ಮೊನ್‌ಸಾಲ್ವೆ ತಿಳಿಸಿದ್ದಾರೆ.

ಕಾಡ್ಗಿಚ್ಚಿನ ಹಾವಳಿಗೆ ಸಿಲುಕಿರುವ ಆರಾವುಕಾನಿಯಾ ರಾಜ್ಯದ ದಕ್ಷಿಣ ಪ್ರಾಂತದಲ್ಲಿ ತುರ್ತುಪರಿಸ್ಥಿತಿ ಘೋಷಿಸಿ ಅಧ್ಯಕ್ಷ ಗ್ಯಾಬ್ರಿಯೆಲ್ ಬೊರಿಕ್ ಆದೇಶ ಹೊರಡಿಸಿದ್ದಾರೆ.

ಚಿಲಿಯ ದಕ್ಷಿಣ ಹಾಗೂ ಕೇಂದ್ರ ಪ್ರಾಂತಗಳಲ್ಲಿ ತಾಪಮಾನ 104 ಡಿಗ್ರಿ ಫ್ಯಾರನ್‌ಹೀಟ್‌ಗೆ ತಲುಪಿದ್ದು, ಹರಡುತ್ತಿರುವ ಕಾಡ್ಗಿಚ್ಚನ್ನು ಶಮನಗೊಳಿಸುವ ಪ್ರಯತ್ನಗಳಿಗೆ ಹಿನ್ನಡೆಯುಂಟಾಗಿದೆ. ಹಲವೆಡೆ ಕಾಡ್ಗಿಚ್ಚು ನಿಯಂತ್ರಣ ಮೀರಿ ವ್ಯಾಪಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಈ ಮಧ್ಯೆ ಕಾಡ್ಗಿಚ್ಚು ಶಮನ ಕಾರ್ಯಾಚರಣೆಗಳಿಗಾಗಿ ಅಗ್ನಿಶಾಮಕ ಪಡೆಗಳು ಹಾಗೂ ಉಪಕರಣಗಳನ್ನು ಕಳುಹಿಸುವ ಕೊಡುಗೆಯನ್ನು ಅರ್ಜೆಂಟೀನ ನೀಡಿದೆ.

ಬ್ರೆಝಿಲ್, ಉರುಗ್ವೆ, ಮೆಕ್ಸಿಕೊ ಹಾಗೂ ಸ್ಪೇನ್ ಕೂಡಾ ಕಾಡ್ಗಿಚ್ಚು ಶಮನ ಕಾರ್ಯಾಚರಣೆಗೆ ನೆರವಾಗುವ ಕೊಡುಗೆ ನೀಡಿರುವುದಾಗಿ ಗೃಹ ಸಚಿವ ಕರೋಲಿನಾ ತೋಹಾ ತಿಳಿಸಿದ್ದಾರೆ.

Similar News