ವೃತ್ತಿ ಘನತೆ ಕೊರತೆಯಿಂದ ನಿರುದ್ಯೋಗ: ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್

Update: 2023-02-06 02:31 GMT

ಮುಂಬೈ: ದೇಶದಲ್ಲಿ ನಿರುದ್ಯೋಗ ತಾಂಡವವಾಡಲು ವೃತ್ತಿಘನತೆಯ ಕೊರತೆ ಕಾರಣ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಅಭಿಪ್ರಾಯಪಟ್ಟಿದ್ದಾರೆ. ಯಾವುದೇ ಸ್ವರೂಪದ ಉದ್ಯೋಗವಾಗಿದ್ದರೂ, ಜನತೆ ಎಲ್ಲ ಬಗೆಯ ಉದ್ಯೋಗವನ್ನು ಗೌರವಿಸಬೇಕು. ಜತೆಗೆ ಉದ್ಯೋಗಕ್ಕಾಗಿ ಹಾತೊರೆಯುವುದನ್ನು ನಿಲ್ಲಿಸಬೇಕು ಎಂದು ಸಲಹೆ ಮಾಡಿದ್ದಾರೆ.

ಸಮಾಜಕ್ಕಾಗಿ ಮಾಡುವ ಯಾವುದೇ ಕೆಲಸವನ್ನು ದೊಡ್ಡದು ಅಥವಾ ಸಣ್ಣದು ಎಂದು ಪರಿಗಣಿಸುವಂತಿಲ್ಲ ಎಂದು ವಿಶ್ಲೇಷಿಸಿದರು. "ಯಾವ ಬಗೆಯ ಉದ್ಯೋಗವನ್ನು ಜನ ಮಾಡಿದರೂ ಪರವಾಗಿಲ್ಲ; ಅದನ್ನು ಗೌರವಿಸಬೇಕು. ವೃತ್ತಿಘನತೆಯ ಕೊರತೆ, ಸಮಾಜದಲ್ಲಿ ನಿರುದ್ಯೋಗ ತಾಂಡವವಾಡಲು ಮುಖ್ಯ ಕಾರಣ. ಒಂದು ಕೆಲಸಕ್ಕೆ ದೈಹಿಕ ಅಥವಾ ಬುದ್ಧವಿಂತಿಕೆ ಹೀಗೆ ಯಾವುದೇ ಅಗತ್ಯವಿರಲಿ, ಅದು ಕಠಿಣ ಪರಿಶ್ರಮದ ಕೆಲಸವಿರಲಿ ಅಥವಾ ಕೌಶಲಗಳಿರಲಿ ಎಲ್ಲವನ್ನೂ ಗೌರವಿಸಬೇಕು ಎಂದು ಸಾರ್ವಜನಿಕ ಸಮಾರಂಭದಲ್ಲಿ ಅಭಿಪ್ರಾಯಟ್ಟರು.

"ಎಲ್ಲರೂ ಉದ್ಯೋಗದ ಹಿಂದೆ ಓಡುತ್ತಿದ್ದಾರೆ. ಸರ್ಕಾರಿ ಉದ್ಯೋಗ ಇರುವುದು ಶೇಕಡ 10ರಷ್ಟು ಮಾತ್ರ. ಇತರ ಉದ್ಯೋಗಗಳು ಶೇಕಡ 20ರಷ್ಟು ಮಾತ್ರ ಇವೆ. ವಿಶ್ವದಲ್ಲಿ ಯಾವ ಸಮಾಜ ಕೂಡಾ ಶೇಕಡ 30ಕ್ಕಿಂತ ಹೆಚ್ಚು ಉದ್ಯೋಗ ಸೃಷ್ಟಿಸಲಾರವು. ಕೈಯಿಂದ ಮಾಡುವ ಕೆಲಸವನ್ನು ಇಂದಿಗೂ ಗೌರವಿಸುತ್ತಿಲ್ಲ" ಎಂದರು.

ಒಬ್ಬ ವ್ಯಕ್ತಿ ಜೀವನಾಧಾರವನ್ನು ಗಳಿಸುತ್ತಾರೆ ಎಂದಾದರೆ, ಸಮಾಜದ ಬಗ್ಗೆ ಆತನಿಗೆ ಹೊಣೆಗಾರಿಕೆ ಇದೆ. ಸಮಾಜಕ್ಕಾಗಿ ಪ್ರತಿಯೊಂದು ಕೆಲಸವನ್ನೂ ಮಾಡುವುದು ಎಂದಾದಾಗ, ಅದು ಸಣ್ಣದು ಅಥವಾ ದೊಡ್ಡದು ಇಲ್ಲವೇ ಒಂದಕ್ಕಿಂತ ಒಂದು ಭಿನ್ನವಾಗಲು ಹೇಗಾಗಲು ಸಾಧ್ಯ ಎಂದು ಪ್ರಶ್ನಿಸಿದರು. ದೇವರ ದೃಷ್ಟಿಯಲ್ಲಿ ಎಲ್ಲರೂ ಸಮಾನರು; ಅವರಿಗಿಂತ ಹಿಂದೆ ಯಾವುದೇ ಜಾತಿ ಪಂಥ ಇದ್ದಿರಲಿಲ್ಲ. ಈ ಎಲ್ಲವನ್ನೂ ಪುರೋಹಿತಶಾಹಿ ಸೃಷ್ಟಿಸಿದ್ದು, ಇದು ತಪ್ಪು ಎಂದು ವಿಶ್ಲೇಷಿಸಿದರು.

Similar News