ಬಾಂಗ್ಲಾದೇಶದಲ್ಲಿ 14 ಹಿಂದೂ ದೇಗುಲ ಧ್ವಂಸ: ವರದಿ

Update: 2023-02-06 05:33 GMT

ಢಾಕಾ: ವಾಯವ್ಯ ಬಾಂಗ್ಲಾದೇಶದಲ್ಲಿ ಅಪರಿಚಿತ ವ್ಯಕ್ತಿಗಳು ರಾತ್ರಿಯಿಡೀ ಸರಣಿ ದಾಳಿ ನಡೆಸಿ 14 ಹಿಂದೂ ದೇವಾಲಯಗಳನ್ನು ಧ್ವಂಸಗೊಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಅಪರಿಚಿತ ದುಷ್ಕರ್ಮಿಗಳು ಕತ್ತಲಿನಲ್ಲಿ ಮೂರು ಪ್ರಾಂತ್ಯಗಳ 14 ಹಿಂದೂ ದೇವಾಲಯಗಳ ಮೂರ್ತಿಗಳನ್ನು ಭಗ್ನಪಡಿಸಿದ್ದಾರೆ" ಎಂದು ಹಿಂದೂ ಸಮುದಾಯದ ಮುಖಂಡ ಬೈದ್ಯನಾಥ್ ಬರ್ಮನ್ ಆಪಾದಿಸಿದ್ದಾರೆ,

ಕೆಲ ಮೂರ್ತಿಗಳನ್ನು ನಾಶಪಡಿಸಲಾಗಿದ್ದು, ಮತ್ತೆ ಕೆಲವು ದೇಗುಲಗಳ ಬಳಿಯ ಕೊಳಗಳಲ್ಲಿ ಪತ್ತೆಯಾಗಿವೆ ಎಂದು ಠಾಕೂರ್‌ಗಾಂವ್ ಉಪಜಿಲ್ಲಾ ಪೂಜಾ ಆಚರಣೆ ಮಂಡಲಿ ಅಧ್ಯಕ್ಷರಾಗಿರುವ ಬರ್ಮನ್ ಸ್ಪಷ್ಟಪಡಿಸಿದ್ದಾರೆ.

ದುಷ್ಕರ್ಮಿಗಳು ಯಾರು ಎನ್ನುವ ಗುರುತು ಪತ್ತೆಯಾಗಿಲ್ಲ. ಆದರೆ ತನಿಖೆ ನಡೆಸಿ ಅವರನ್ನು ನ್ಯಾಯದ ಕಟಕಟೆಗೆ ತರಬೇಕು ಎಂದು ಅವರು ಹೇಳಿದ್ದಾರೆ.

ಈ ಪ್ರದೇಶ ಅಂತರ್ ಧರ್ಮೀಯ ಸಾಮರಸ್ಯಕ್ಕೆ ಹೆಸರಾಗಿದ್ದು, ಈ ಹಿಂದೆ ಎಂದಿಗೂ ಇಂಥ ನೀಚ ಕೃತ್ಯಗಳು ಆಗಿರಲಿಲ್ಲ ಎಂದು ಹಿಂದೂ ಸಮುದಾಯದ ಮುಖಂಡ ಹಾಗೂ ಯೂನಿಯನ್ ಪರಿಷತ್ ಅಧ್ಯಕಷ ಸಮರ್ ಚಟರ್ಜಿ ತಿಳಿಸಿದ್ದಾರೆ.

ಬಹುಸಂಖ್ಯಾತ ಮುಸ್ಲಿಮರು ಹಿಂದೂಗಳೊಂದಿಗೆ ಯಾವುದೇ ವ್ಯಾಜ್ಯ ಹೊಂದಿಲ್ಲ. ಯಾರು ಈ ಕೃತ್ಯ ಎಸಗಿದ್ದಾರೆ ಎಂದೇ ಅರ್ಥವಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ, ಬಲಿಯಾದಂಗಿ ಪೊಲೀಸ್ ಠಾಣೆ ಅಧಿಕಾರಿ ಖೈರುಲ್ ಅನಾಮ್ ಅವರ ಪ್ರಕಾರ ಶನಿವಾರ ರಾತ್ರಿ ಹಾಗೂ ಭಾನುವಾರದ ನಸುಕಿನಲ್ಲಿ ಹಲವು ಗ್ರಾಮಗಳಲ್ಲಿ ದಾಳಿ ನಡೆದಿದೆ.

Similar News