ಪ್ರಮಾಣವಚನ ಸ್ವೀಕರಿಸಿದ ಸುಪ್ರೀಂ ಕೋರ್ಟಿನ 5 ನೂತನ ನ್ಯಾಯಾಧೀಶರು

Update: 2023-02-06 05:55 GMT

ಹೊಸದಿಲ್ಲಿ:ಸುಪ್ರೀಂ ಕೋರ್ಟಿನ ಐದು ಮಂದಿ ಹೊಸ ನ್ಯಾಯಾಧೀಶರುಗಳು ಸೋಮವಾರ ಪ್ರಮಾಣವಚನ ಸ್ವೀಕರಿಸಿದರು. ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಎಲ್ಲಾ ಹೊಸ ನ್ಯಾಯಾಧೀಶರುಗಳಿಗೆ ಪ್ರಮಾಣವಚನ ಬೋಧಿಸಿದರು. ಕೊಲೀಜಿಯಂ ಶಿಫಾರಸು ಮಾಡಿದ ಈ ನ್ಯಾಯಾಧೀಶರುಗಳ ಹೆಸರುಗಳಿಗೆ ಕೇಂದ್ರ ಇತ್ತೀಚೆಗೆ ಅನುಮೋದನೆ ನೀಡಿತ್ತು.

ಕ್ರಮವಾಗಿ ರಾಜಸ್ಥಾನ, ಪಾಟ್ನಾ ಮತ್ತು ಮಣಿಪುರ ಹೈಕೋರ್ಟಿನ ನ್ಯಾಯಾಧೀಶರುಗಳಾದ ಪಂಕಜ್ ಮಿತ್ತಲ್‌, ಸಂಜಯ್‌ ಕರೋಲ್‌ ಮತ್ತು ಪಿ ವಿ ಸಂಜಯ್‌ ಸಿಂಗ್‌, ಪಾಟ್ನಾ ಹೈಕೋರ್ಟಿನ ಜಸ್ಟಿಸ್‌ ಅಹ್ಸಾನುದ್ದೀನ್‌ ಅಮಾನುಲ್ಲಾ ಮತ್ತು ಅಲಹಾಬಾದ್‌ ಹೈಕೋರ್ಟಿನ ಜಸ್ಟಿಸ್‌ ಮನೋಜ್‌ ಮಿಶ್ರಾ ಇಂದು ಪ್ರಮಾಣ ವಚನ ಸ್ವೀಕರಿಸಿದರು.

Similar News