ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶೆಯಾಗಿ ಗೌರಿ ನೇಮಕ ಪ್ರಶ್ನಿಸಿ ಸಲ್ಲಿಸಿದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

Update: 2023-02-07 05:48 GMT

ಹೊಸದಿಲ್ಲಿ:ಮದ್ರಾಸ್ ಹೈಕೋರ್ಟ್‌ನ ಹೆಚ್ಚುವರಿ  ನ್ಯಾಯಾಧೀಶೆಯಾಗಿ ವಕೀಲೆ ಎಲ್.  ವಿಕ್ಟೋರಿಯ ಗೌರಿಯ ನೇಮಕಾತಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ ಎಂದು ವರದಿಯಾಗಿದೆ.

ವಿಕ್ಟೋರಿಯ ಗೌರಿ ಮದ್ರಾಸ್ ಹೈಕೋರ್ಟ್‌ನ ಮದುರೈ ಪೀಠದಲ್ಲಿ ಕೇಂದ್ರ ಸರಕಾರವನ್ನು ಪ್ರತಿನಿಧಿಸುತ್ತಿದ್ದರು. ಬಿಜೆಪಿ ಹಾಗೂ  ಆರೆಸ್ಸೆಸ್ ನೊಂದಿಗೆ ಅವರು ಹೊಂದಿದ್ದಾರೆನ್ನಲಾಗಿರುವ ನಂಟು ಬಹಿರಂಗಗೊಂಡ ಬಳಿಕ, ಅವರನ್ನು ಮದ್ರಾಸ್ ಹೈಕೋರ್ಟ್‌ನ ನ್ಯಾಯಾಧೀಶೆಯಾಗಿ ನೇಮಿಸುವ ಪ್ರಸ್ತಾವವು ಭಾರೀ ವಿವಾದಕ್ಕೆ ಕಾರಣವಾಗಿತ್ತು.

ಮುಸ್ಲಿಮರು ಮತ್ತು ಕ್ರೈಸ್ತರ ವಿರುದ್ಧ ಅವರು ನೀಡಿದ್ದಾರೆನ್ನಲಾಗಿರುವ ಹಲವು ಹೇಳಿಕೆಗಳು ಈಗ ಮುನ್ನೆಲೆಗೆ ಬಂದಿವೆ.

Similar News