ಶರ್ಜೀಲ್‌, ಆಸಿಫ್‌ ಇಕ್ಬಾಲ್‌ ರನ್ನು ದೋಷಮುಕ್ತಗೊಳಿಸಿದ್ದನ್ನು ಪ್ರಶ್ನಿಸಿ ದಿಲ್ಲಿ ಹೈಕೋರ್ಟ್‌ ಕದ ತಟ್ಟಿದ ಪೊಲೀಸರು

ಜಾಮಿಯಾ ಹಿಂಸಾಚಾರ ಪ್ರಕರಣ

Update: 2023-02-07 09:50 GMT

ಹೊಸದಿಲ್ಲಿ: ವಿದ್ಯಾರ್ಥಿ ಹೋರಾಟಗಾರರಾದ ಶರ್ಜೀಲ್‌ ಇಮಾಮ್‌ (Sharjeel Imam) ಮತ್ತು ಆಸಿಫ್‌ ಇಕ್ಬಾಲ್‌ ತನ್ಹಾ ಅವರನ್ನು 2019 ಜಾಮಿಯಾ ನಗರ ಹಿಂಸಾಚಾರ ಪ್ರಕರಣದಲ್ಲಿ (Jamia Nagar violence case) ದೋಷಮುಕ್ತಗೊಳಿಸಿ  ನ್ಯಾಯಾಲಯವೊಂದು ಹೊರಡಿಸಿದ ಆದೇಶವನ್ನು ಪ್ರಶ್ನಿಸಿ ದಿಲ್ಲಿ ಪೊಲೀಸರು ಇಂದು ದಿಲ್ಲಿ ಹೈಕೋರ್ಟಿನ ಕದ ತಟ್ಟಿದ್ದಾರೆ.

ಫೆಬ್ರವರಿ 4 ರಂದು ವಿಚಾರಣಾ ನ್ಯಾಯಾಲಯವು ಶರ್ಜೀಲ್‌, ಆಸಿಫ್‌ ಸಹಿತ 11 ಮಂದಿಯನ್ನು ಖುಲಾಸೆಗೊಳಿಸಿತ್ತಲ್ಲದೆ ಪೊಲೀಸರು ಅವರನ್ನು ಬಲಿಪಶುಗಳನ್ನಾಗಿಸಿದ್ದರು ಎಂದಿತ್ತು. ಅಸಮ್ಮತಿ ವ್ಯಕ್ತಪಡಿಸಲು ಅವಕಾಶ ನೀಡಬೇಕು ಅದನ್ನು ದಮನಿಸಬಾರದೆಂದೂ ನ್ಯಾಯಾಲಯ ಹೇಳಿತ್ತು. ಅದೇ ಸಮಯ ಪ್ರಕರಣದಲ್ಲಿ ಒಬ್ಬ ಆರೋಪಿ ಮುಹಮ್ಮದ್‌ ಇಲ್ಯಾಸ್‌ ವಿರುದ್ಧದ ಪ್ರಕರಣ ಮುಂದುವರಿಸಲು ನ್ಯಾಯಾಲಯ ನಿರ್ಧರಿಸಿದೆ.

ದಿಲ್ಲಿ ಪೊಲೀಸರು ಸಲ್ಲಿಸಿರುವ ಅರ್ಜಿಯ ವಿಚಾರಣೆ ದಿನಾಂಕವನ್ನು ಇನ್ನಷ್ಟೇ ನಿಗದಿಪಡಿಸಬೇಕಿದೆ.

ಜಾಮಿಯಾ ಮಿಲ್ಲಿಯಾ ವಿವಿ ಸಮೀಪ ಡಿಸೆಂಬರ್‌ 2019 ರಲ್ಲಿ ಪೌರತ್ವ ತಿದ್ದುಪಡಿ ಕಾಯಿದೆ ಹಾಗೂ ಎನ್‌ಆರ್‌ಸಿ ವಿರುದ್ಧ ನಡೆದ ಪ್ರತಿಭಟನೆ ಹಿಂಸಾತ್ಮಕ ಸ್ವರೂಪಕ್ಕೆ ತಿರುಗಿತ್ತು. ಪ್ರಕರಣದಲ್ಲಿ ಪೊಲೀಸರು 12 ಮಂದಿ ಆರೋಪಿಗಳನ್ನು ಹೆಸರಿಸಿದ್ದರು. ಇವರಲ್ಲಿ ಒಟ್ಟು 11 ಮಂದಿಯನ್ನು ದೋಷಮುಕ್ತಗೊಳಿಸಲಾಗಿತ್ತು.

ಇಮಾಮ್‌, ತನ್ಹಾ ಮತ್ತು ಝರ್ಗರ್‌ ಸಹಿತ ನ್ಯಾಯಾಲಯವು ಮುಹಮ್ಮದ್‌ ಅಬುಝರ್‌, ಉಮೈರ್‌ ಅಹ್ಮದ್‌, ಮುಹಮ್ಮದ್‌ ಶೋಯಿಬ್.‌ ಮಹಮೂದ್‌ ಅನ್ವರ್, ಮುಹಮ್ಮದ್‌ ಖಾಸಿಂ, ಮುಹಮ್ಮದ್‌ ಬಿಲಾಲ್‌ ನದೀಂ, ಶಹಝರ್‌ ರಝಾ ಖಾನ್‌ ಮತ್ತು ಚಂದಾ ಯಾದವ್‌ ಅವರನ್ನು ದೋಷಮುಕ್ತಗೊಳಿಸಿತ್ತು.

ಇದನ್ನೂ ಓದಿ: ಪ್ರಧಾನಿಯ 'ಪರೀಕ್ಷಾ ಪೆ ಚರ್ಚಾ': ಐದು ವರ್ಷಗಳಲ್ಲಿ ರೂ. 28 ಕೋಟಿ ವೆಚ್ಚ

Similar News