ಅದಾನಿ ಸಮೂಹದ ಎಲ್ಲ ಸ್ವತ್ತನ್ನೂ ರಾಷ್ಟ್ರೀಕರಣಗೊಳಿಸಿ ಹರಾಜು ಹಾಕಬೇಕು: ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ
Update: 2023-02-09 16:20 IST
ಚೆನ್ನೈ: ಹಿಂಡೆನ್‌ಬರ್ಗ್ ವರದಿಯಿಂದ ಅದಾನಿ ಸಮೂಹದ ಶೇರುಗಳು ಅಸ್ಥಿರವಾಗಿ, ಲೋಕಸಭೆಯಲ್ಲೂ ವಿರೋಧ ಪಕ್ಷಗಳು ಈ ಕುರಿತು ಗದ್ದಲ ಸೃಷ್ಟಿಸಿರುವುದರಿಂದ ಕೇಂದ್ರ ಸರ್ಕಾರವು ಅದಾನಿ ಸಮೂಹದ ಎಲ್ಲ ಸ್ವತ್ತುಗಳನ್ನೂ ರಾಷ್ಟ್ರೀಕರಣಗೊಳಿಸಿ, ನಂತರ ಹರಾಜು ಹಾಕಬೇಕು ಎಂದು ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಹಣಕಾಸು ಸಚಿವ ಸುಬ್ರಮಣಿಯನ್ ಸ್ವಾಮಿ ಆಗ್ರಹಿಸಿದ್ದಾರೆ.
PTI ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿರುವ ಅವರು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ 2023-24ನೇ ಸಾಲಿನ ಬಜೆಟ್ ಯಾವುದೇ ದೂರದೃಷ್ಟಿಯನ್ನಾಗಲಿ ಅಥವಾ ಯೋಜನೆಗಳನ್ನಾಗಲಿ ಹೊಂದಿಲ್ಲ. ಚೀನಾ ಗಡಿ ವಿಚಾರದಲ್ಲಿ ಆಕ್ರಮಣಕಾರಿಯಾಗಿ ವರ್ತಿಸುತ್ತಿರುವ ಹೊತ್ತಿನಲ್ಲಿ ರಕ್ಷಣಾ ವಲಯಕ್ಕೆ ಮೀಸಲಿರಿಸಿರುವ ಅನುದಾನವು ಕಡಿಮೆಯಾಗಿದೆ ಎಂದೂ ಹೇಳಿದ್ದಾರೆ.