ಬಿಜೆಪಿಯ ವಿಕಾಸ್‌ ರಥ ಯಾತ್ರೆಯ ನಡುವೆ ತುರಿಕೆ ತಾಳಲಾರದೆ ಕುರ್ತಾ ತೆಗೆದು ಸ್ಥಳದಲ್ಲಿಯೇ ಒಗೆದ ಮಧ್ಯ ಪ್ರದೇಶ ಸಚಿವ

Update: 2023-02-10 10:24 GMT

ಭೋಪಾಲ್:‌ ಮಧ್ಯಪ್ರದೇಶದಲ್ಲಿ ಬಿಜೆಪಿಯ ವಿಕಾಸ್‌ ರಥ ಯಾತ್ರಾಗೆ ಮಂಗಳವಾರ ಒಂದು ವಿಚಿತ್ರ ಸಮಸ್ಯೆಯಿಂದ ಸ್ವಲ್ಪ ತೊಡಕುಂಟಾಗಿತ್ತು. ರಾಜ್ಯ ಸಚಿವ ಬೃಜೇಂದ್ರ ಸಿಂಗ್‌ ಯಾದವ್‌ ಅವರ  ಮೇಲೆ ತುರಿಕೆ ಉಂಟು ಮಾಡುವ ಹುಡಿಯನ್ನು ಯಾರೋ ಎರಚಿದ್ದಾರೇನೋ ಎಂಬ ಸಂಶಯ ಈ ಘಟನೆಯಿಂದಾಗಿ ಮೂಡಿತ್ತು ಎಂದು ndtv.com ವರದಿ ಮಾಡಿದೆ.

ಸಚಿವರ ವಿಧಾನಸಭಾ ಕ್ಷೇತ್ರವಾದ ಮುಂಗೌಲಿ ಎಂಬಲ್ಲಿ ಯಾತ್ರೆ ಸಾಗುತ್ತಿದ್ದಾಗ ಈ ಘಟನೆ ನಡೆದಿದೆ. ಸಚಿವರಿಗೆ ಅದೆಷ್ಟು ತುರಿಕೆಯುಂಟಾಯಿತೆಂದರೆ ಅವರು ತಮ್ಮ ಕುರ್ತಾ ತೆಗೆದು ಬಾಟಲಿ ನೀರಿನಲ್ಲಿ ಅದನ್ನು ತೊಳೆದುಬಿಟ್ಟರು. ಈ ಘಟನೆಯ ವೀಡಿಯೋ ಇದೀಗ ವೈರಲ್‌ ಆಗಿದೆ.

ಎರಡು ದಿನಗಳ ಹಿಂದೆ  ಖಂಡ್ವಾ ಜಿಲ್ಲೆ ಮೂಲಕ ಹಾದು ಹೋಗುವಗ ವಿಕಾಸ ರಥ ಒಂದು ಕೆಟ್ಟ ರಸ್ತೆಯಲ್ಲಿ ಸಿಲುಕಿಕೊಂಡಿತ್ತು. ಇದರಿಂದಾಗಿ ಯಾತ್ರೆಯ ನೇತೃತ್ವ ವಹಿಸಿದ್ದ ಸ್ಥಳೀಯ ಬಿಜೆಪಿ ಶಾಸಕ ದೇವೇಂದ್ರ ವರ್ಮ  ಮತ್ತು ಗ್ರಾಮದ ಮಾಜಿ ಸರಪಂಚನ ನಡುವೆ ವ್ಯಾಗ್ಯುದ್ಧವೇ ನಡೆದು ಹೋಗಿತ್ತು.

ಈ ಸ್ಥಳದಲ್ಲಿ ಮೂರು ಕಿಮೀ ರಸ್ತೆಯನ್ನೂ ಸರ್ಕಾರ ಸರಿಯಾಗಿ ನಿರ್ಮಿಸದೇ ಇರುವಾಗ ವಿಕಾಸ ಯಾತ್ರೆ ಏಕೆ ಬೇಕು. ಉತ್ತಮ ರಸ್ತೆ ನೀಡಿ, ಇಲ್ಲದಿದ್ದರೆ ಮತ ನೀಡುವುದಿಲ್ಲ, ಎಂದು ಸರಪಂಚ ಹೇಳಿದಾಗ ಶಾಸಕ "ಮತ ಹಾಕಬೇಡಿ, ಅದು ನಿಮ್ಮ ಹಕ್ಕು," ಎಂದಿದ್ದರು. ಈ ವೀಡಿಯೋ ಕೂಡ ವೈರಲ್‌ ಆಗಿತ್ತು.

ಇದನ್ನೂ ಓದಿ: ಹಳೆಯ ಬಜೆಟ್ ಓದಿ ಮುಜುಗರಕ್ಕೆ ಒಳಗಾದ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್

Similar News