ದೇರಳಕಟ್ಟೆ: ಕಾರು ಢಿಕ್ಕಿಯಾಗಿ ಸ್ಕೂಟರ್ ಸವಾರ ಮೃತ್ಯು
Update: 2023-02-10 21:17 IST
ಮಂಗಳೂರು: ದೇರಳಕಟ್ಟೆ ಸಮೀಪದ ನಾಟೆಕಲ್-ಕಲ್ಕಟ್ಟ ಎಂಬಲ್ಲಿ ಗುರುವಾರ ರಾತ್ರಿ ಕಾರು ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಹೊಟೇಲ್‌ವೊಂದರಲ್ಲಿ ಕೆಲಸ ಮಾಡುವ ಅನಿಲ್ ಕುಮಾರ್ ಮೃತಪಟ್ಟ ಸ್ಕೂಟರ್ ಸವಾರ. ಇವರು ಗುರುವಾರ ರಾತ್ರಿ ಸುಮಾರು 11:30ಕ್ಕೆ ನಾಟೆಕಲ್‌ನಿಂದ ಮಂಜನಾಡಿ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಕಲ್ಕಟ್ಟ ಎಂಬಲ್ಲಿಗೆ ತಲುಪುತ್ತಿದ್ದಂತೆಯೇ ವಿರುದ್ಧ ಕಡೆಯಿಂದ ಬರುತ್ತಿದ್ದ ಕಾರು ಢಿಕ್ಕಿ ಹೊಡೆಯಿತು. ಇದರಿಂದ ಗಂಭೀರ ಗಾಯಗೊಂಡ ಅನಿಲ್ ಕುಮಾರ್‌ರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಯಿತು. ಬಳಿಕ ಸಮೀಪದ ಇನ್ನೊಂದು ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಸುಮಾರು 1:49ಕ್ಕೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ಸಜೀದ್ ಎಂಬವರು ಸಂಚಾರ ದಕ್ಷಿಣ ಠಾಣೆಗೆ ದೂರು ನೀಡಿದ್ದಾರೆ.
ಅದರಂತೆ ಆರೋಪಿ ಕಾರು ಚಾಲಕ ಅಬೂಬಕ್ಕರ್ ಸಿದ್ದೀಕ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.