×
Ad

ಕಳ್ಳತನದ ಆರೋಪದಿಂದ ನೊಂದು ಬುಡಕಟ್ಟು ವ್ಯಕ್ತಿ ಆತ್ಮಹತ್ಯೆ

Update: 2023-02-11 23:01 IST

ಕೋಝಿಕ್ಕೋಡ್,ಫೆ.11: ತನ್ನ ಮೇಲೆ ಹೊರಿಸಲಾಗಿದ್ದ ಕಳ್ಳತನದ ಆರೋಪದಿಂದ ನೊಂದ ಬುಡಕಟ್ಟು ವ್ಯಕ್ತಿಯೋರ್ವ ಶನಿವಾರ ಕೋಝಿಕ್ಕೋಡ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ಆವರಣದಲ್ಲಿಯ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ವರದಿಯಾಗಿದೆ.

ವಯನಾಡ್ ಜಿಲ್ಲೆಯ ಕಲ್ಪೆಟ್ಟದ ಪರವಾಯಲ್ ಕಾಲನಿಯ ನಿವಾಸಿ ವಿಶ್ವನಾಥನ್(Viswanathan) (46) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ.

ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿರುವ ಪತ್ನಿ ಬಿಂದು(Bindu)ವಿನ ಜೊತೆಯಿರಲು ವಿಶ್ವನಾಥನ್ ಆಸ್ಪತ್ರೆಗೆ ಬಂದಿದ್ದರು.

ಆಸ್ಪತ್ರೆಯಿಂದ ಹಣ ಮತ್ತು ಮೊಬೈಲ್ ಫೋನ್ ಕದ್ದಿರುವುದಾಗಿ ಆರೋಪಿಸಿ ಆಸ್ಪತ್ರೆ ಸಿಬ್ಬಂದಿಗಳು ತನ್ನ ಅಳಿಯನ ಮೇಲೆ ದೈಹಿಕ ಹಲ್ಲೆ ನಡೆಸಿದ್ದರು. ತಾನು ಕಳ್ಳತನ ಮಾಡಿಲ್ಲವೆಂದು ಗೋಗರೆದರೂ ದೈಹಿಕ ಹಿಂಸೆಯನ್ನು ನೀಡಿದ್ದರು ಎಂದು ವಿಶ್ವನಾಥನ್‌ರ ಅತ್ತೆ ಲೀಲಾ ಸುದ್ದಿಗಾರರಿಗೆ ತಿಳಿಸಿದರು.

ಘಟನೆಯ ಬೆನ್ನಲ್ಲೇ ನಾಪತ್ತೆಯಾಗಿದ್ದ ವಿಶ್ವನಾಥನ್ ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರ ಕುಟುಂಬವು ಈ ಬಗ್ಗೆ ತನಿಖೆಗೆ ಆಗ್ರಹಿಸಿದೆ.

Similar News