×
Ad

ಮೂರು ಬಾರಿ ಸ್ಥಗಿತಗೊಂಡಿದ್ದ ದಿಲ್ಲಿ ಮೇಯರ್ ಚುನಾವಣೆ ಗುರುವಾರ ನಡೆಸಲು ಲೆಫ್ಟಿನೆಂಟ್ ಗವರ್ನರ್ ಸಮ್ಮತಿ

Update: 2023-02-12 11:16 IST

ಹೊಸದಿಲ್ಲಿ: ಆಮ್ ಆದ್ಮಿ ಪಕ್ಷ (ಎಎಪಿ) ಹಾಗೂ  ಬಿಜೆಪಿ ನಡುವಿನ ಜಗಳದಿಂದಾಗಿ  ಮೂರು  ವಿಫಲ ಪ್ರಯತ್ನಗಳ ನಂತರ ಮೇಯರ್ ಆಯ್ಕೆಗಾಗಿ ದಿಲ್ಲಿಯ  ಮಹಾನಗರ ಪಾಲಿಕೆ ಸದಸ್ಯರು ಗುರುವಾರ ಸಭೆ ಸೇರಲಿದ್ದಾರೆ.

ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು ಫೆಬ್ರವರಿ 16 ರಂದು ಮೇಯರ್ ಚುನಾವಣೆ ನಡೆಸುವ ಆಪ್ ಸರಕಾರದ ಪ್ರಸ್ತಾವನೆಯನ್ನು ಇಂದು ಬೆಳಿಗ್ಗೆ ಒಪ್ಪಿಕೊಂಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಇತ್ತೀಚೆಗೆ ನಡೆದ ಮಹಾನಗರ ಪಾಲಿಕೆ  ಚುನಾವಣೆಯಲ್ಲಿ ಬಿಜೆಪಿಗಿಂತ ಹೆಚ್ಚಿನ ಸ್ಥಾನಗಳನ್ನು ಎಎಪಿ ಗೆದ್ದಿದ್ದರೂ ಮೇಯರ್ ಸ್ಥಾನಕ್ಕೆ ಬಿಜೆಪಿ ನಾಯಕನನ್ನು ಆಯ್ಕೆ ಮಾಡುವ ಮೂಲಕ ದಿಲ್ಲಿ ಮುನ್ಸಿಪಲ್ ಕಾರ್ಪೊರೇಷನ್ ಅನ್ನು ವಶಪಡಿಸಿಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಎಎಪಿ ಆರೋಪಿಸಿದೆ.

Similar News