×
Ad

​ಉದ್ಯೋಗ, ಉದ್ಯಮ ಬಯಸಿದ್ದ ಜಮ್ಮಕಾಶ್ಮೀರದ ಜನತೆಗೆ ಬಿಜೆಪಿ ಬುಲ್ಡೋಝರ್ ಕಳುಹಿಸಿಕೊಟ್ಟಿದೆ: ರಾಹುಲ್ ಗಾಂಧಿ

Update: 2023-02-13 00:25 IST

ಹೊಸದಿಲ್ಲಿ,ಫೆ.12: ಜಮ್ಮುಕಾಶ್ಮೀರದ ಜನತೆಗೆ ಉದ್ಯೋಗವನ್ನು ಒದಗಿಸುವಲ್ಲಿ ಬಿಜೆಪಿ ವಿಫಲವಾಗಿದೆ. ಇದಕ್ಕೆ ಪ್ರತಿಯಾಗಿ ಅದು ಬಡ ನಿವಾಸಿಗಳನ್ನು ಒಕ್ಕಲೆಬ್ಬಿಸಲು ಬುಲ್ಡೋಝರ್ಗಳನ್ನು ಕಳುಹಿಸಿದೆ ಎಂದು ಕಾಂಗ್ರೆಸ್ ರಾಹುಲ್ ಗಾಂಧಿ ರವಿವಾರ ಟೀಕಿಸಿದ್ದಾರೆ.

‘‘ಜಮ್ಮುಕಾಶ್ಮೀರದ ಜನರು ಉದ್ಯೋಗ, ಉತ್ತಮ ವ್ಯಾಪಾರ ಹಾಗೂ ಪ್ರೀತಿಯನ್ನು ಬಯಸುತ್ತಿದ್ದಾರೆ. ಅದರ ಬದಲಿಗೆ ಅವರಿಗೆ ಸಿಕ್ಕಿದ್ದೇನು?. ಬಿಜೆಪಿಯ ಬುಲ್ಡೋಜರ್ ಅಷ್ಟೇ’’ ಎಂದು ರಾಹುಲ್ ರವಿವಾರ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ‘‘ ಹಲವು ದಶಕಗಳಿಂದ ಶ್ರಮಪಟ್ಟು ಉಳುಮೆ ಮಾಡಿದ ಜಮೀನನ್ನು ಜನರಿಂದ ಕಿತ್ತುಕೊಳ್ಳಲಾಗಿದೆ. ಶಾಂತಿ ಹಾಗೂ ಕಾಶ್ಮೀರಿಯತ್ (ಕಾಶ್ಮೀರಿ ಅಸ್ಮಿತೆ)ಯು ಜನರನ್ನು ಒಗ್ಗೂಡಿಸುವ ಮೂಲಕ ಉಳಿಯುವುದೇ ಹೊರತು ಅವರನ್ನು ವಿಭಜಿಸುವುದರಿಂದಲ್ಲ’’ ಎಂದವರು ಟ್ವೀಟಿಸಿದ್ದಾರೆ.

ರಾಜ್ಯದ ಎಲ್ಲಾ ಜಮೀನು ಅತಿಕ್ರಮಣಗಳನ್ನು ಜನವರಿ 31ರೊಳಗೆ ತೆರವುಗೊಳಿಸಬೇಕೆಂದು ಜಮ್ಮುಕಾಶ್ಮೀರ ಆಡಳಿತವು ಎಲ್ಲಾ ಜಿಲ್ಲಾಧಿಕಾರಿಗಳಿಗೆ ನಿರ್ದೇಶ ನೀಡಿತ್ತು.

ಕಳೆದ ಕೆಲವು ದಿನಗಳಿಂದ ನಡೆಸುತ್ತಿರುವ ಬೃಹತ್ ಭೂ ಒತ್ತುವರಿ ಕಾರ್ಯಾಚರಣೆಯಲ್ಲಿ 2.75 ಲಕ್ಷ ಎಕರೆಗೂ ಅಧಿಕ ಜಮೀನನ್ನು ವಶಪಡಿಸಿಕೊಳ್ಳಲಾಗಿದೆಯೆಂದು ಜಮ್ಮಕಾಶ್ಮೀರ ಸರಕಾರ ತಿಳಿಸಿದೆ. ಜನವರಿ 31ರೊಳಗೆ ಸರಕಾರಿ ಜಮೀನುಗಳ ಒತ್ತುವರಿಯನ್ನು ತೆರವುಗೊಳಿಸಬೇಕೆಂದು ಜಮ್ಮುಕಾಶ್ಮೀರದ ಸುತ್ತೋಲೆಗೆ ತಡೆಯಾಜ್ಞೆ ತರಲು ಸುಪ್ರೀಂಕೋರ್ಟ್ ನಿರಾಕರಿಸಿದೆ.

ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ತಮ್ಮ ಜಮೀನುಗಳನ್ನು ತಾವು ಕಳೆದುಕೊಳ್ಳಲಿದೆಯೆಂದು ಸ್ಥಳೀಯರು ಆತಂಕ ಹೊಂದಿದ್ದಾರೆ. ಆದರೆ ಸರಕಾರವು ಪ್ರಭಾವಿ ವ್ಯಕ್ತಿಗಳೆಂದ ಮಾತ್ರವೇ ಜಮೀನನನ್ನು ಮರಳಿ ಪಡೆಯುವುದೆಂದು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಭರವಸೆ ನೀಡಿದ್ದಾರೆ.

Similar News