ಪಕ್ಷ ವಿರೋಧಿ ಚಟುವಟಿಕೆ: ನಾಲ್ವರು ನಾಯಕರನ್ನು ಅಮಾನತು ಮಾಡಿದ ಜಾರ್ಖಂಡ್ ಕಾಂಗ್ರೆಸ್
Update: 2023-02-13 10:00 IST
ರಾಂಚಿ: ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಪಾಲ್ಗೊಂಡ ಆರೋಪದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಲೋಕ್ ದುಬೆ ಹಾಗೂ ಡಾ. ರಾಜೇಶ್ ಗುಪ್ತಾ ಸೇರಿದಂತೆ ನಾಲ್ವರು ನಾಯಕರನ್ನು ಜಾರ್ಖಂಡ್ ಕಾಂಗ್ರೆಸ್ ಆರು ವರ್ಷಗಳ ಕಾಲ ಅಮಾನತುಗೊಳಿಸಿದೆ.
ಅಲೋಕ್ ದುಬೆ, ಲಾಲ್ ಕಿಶೋರ್ ನಾಥ್ ಶಹದೇವ್, ಡಾ.ರಾಜೇಶ್ ಗುಪ್ತಾ ಹಾಗೂ ಸಾಧು ಶರಣ್ ಗೋಪೆ ಅವರನ್ನು ರಾಜ್ಯ ನಾಯಕತ್ವದ ವಿರುದ್ಧ ಚಟುವಟಿಕೆ ನಡೆಸಿರುವ ಆರೋಪದಲ್ಲಿ ಅಮಾನತುಗೊಳಿಸುವಂತೆ ಶಿಸ್ತು ಸಮಿತಿ ಶಿಫಾರಸು ಮಾಡಿತ್ತು.