ಗಂಗೊಳ್ಳಿ: ಸುಣ್ಣದ ಬದಲು ಇಲಿ ಪಾಷಾಣದೊಂದಿಗೆ ವೀಳ್ಯದೆಲೆ ಸೇವಿಸಿ ವೃದ್ಧೆ ಮೃತ್ಯು
Update: 2023-02-13 20:45 IST
ಗಂಗೊಳ್ಳಿ: ಸುಣ್ಣದ ಬದಲು ಇಲಿ ಪಾಷಾಣದೊಂದಿಗೆ ವೀಳ್ಯದೆಲೆ ಸೇವಿಸಿ ವೃದ್ಧೆಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.
ಮೃತರನ್ನು ಸಾಧು ಪೂಜಾರ್ತಿ(71) ಎಂದು ಗುರುತಿಸಲಾಗಿದೆ. ಇವರು ಫೆ.6ರಂದು ಬೆಳಗ್ಗೆ ವಿಳ್ಯದೆಲೆಗೆ ಸುಣ್ಣವೆಂದು ತಿಳಿದು ಇಲಿ ಪಾಷಾಣವನ್ನು ಸೇರಿಸಿ ತಿಂದಿದ್ದು, ಇದರಿಂದ ತೀವ್ರವಾಗಿ ಅಸ್ವಸ್ಥಗೊಂಡ ಅವರು, ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಫೆ.12ರಂದು ಸಂಜೆ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.