ಲೈಫ್ ಮಿಷನ್ ಕೇಸ್: ಕೇರಳದ ಮಾಜಿ ಪ್ರಧಾನ ಕಾರ್ಯದರ್ಶಿಯ ಬಂಧನ

Update: 2023-02-15 04:44 GMT

ಕೊಚ್ಚಿ: ಲೈಫ್ ಮಿಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಮುಖ್ಯಮಂತ್ರಿ ಕಚೇರಿಯ ಮಾಜಿ ಪ್ರಧಾನ ಕಾರ್ಯದರ್ಶಿ ಎಂ.  ಶಿವಶಂಕರ್ ಅವರನ್ನು ಜಾರಿ ನಿರ್ದೇಶನಾಲಯ(ಈಡಿ)  ಬಂಧಿಸಿದೆ ಎಂದು ಮೂಲಗಳು ತಿಳಿಸಿವೆ.

ಈ ಪ್ರಕರಣದಲ್ಲಿ ಇದು ಮೊದಲ ಬಂಧನವಾಗಿದೆ.

ಈ ಪ್ರಕರಣವು ರಾಜ್ಯ ಸರಕಾರದ ಲೈಫ್ ಮಿಷನ್ ಪ್ರಾಜೆಕ್ಟ್‌ಗೆ ಸಂಬಂಧಿಸಿದೆ, ಇದು ತ್ರಿಶೂರ್ ಜಿಲ್ಲೆಯ ವಡಕ್ಕಂಚರಿಯಲ್ಲಿ 140 ಕುಟುಂಬಗಳಿಗೆ ಲೈಫ್ ಮಿಷನ್ ಯೋಜನೆಯ ಮೂಲಕ ಮನೆಗಳನ್ನು ನಿರ್ಮಿಸಲು ಉದ್ದೇಶಿಸಿತ್ತು. ಯುಎಇ ದೂತಾವಾಸದ ಮೂಲಕ ರೆಡ್ ಕ್ರೆಸೆಂಟ್ ನೀಡಿದ 18.50 ಕೋಟಿಗಳಲ್ಲಿ 14.50 ಕೋಟಿಯನ್ನು   ಲೈಫ್ ಮಿಷನ್ ಯೋಜನೆಯಲ್ಲಿ ಖರ್ಚು ಮಾಡಲಾಗಿತ್ತು.

ಈ ಯೋಜನೆಗಾಗಿ ಸ್ವಪ್ನ ಸುರೇಶ್ 4.48 ಕೋ.ರೂ. ಲಂಚ ಪಡೆದಿದ್ದಾರೆ ಎಂದು ಯುನಿಟೆಕ್ ಆಡಳಿತ ನಿರ್ದೇಶಕ ಸಂತೋಷ್ ಮಾಹಿತಿ ನೀಡಿದ್ದಾರೆ.

ಇದರಲ್ಲಿ ಶಿವಶಂಕರ್ ಕೈವಾಡವಿದೆ ಎಂದು ಆರೋಪಿಗಳಾದ ಸ್ವಪ್ನಾ ಸುರೇಶ್ ಹಾಗೂ ಸರಿತಾ ಪಿಎಸ್ ಆರೋಪಿಸಿದ್ದರು.

Similar News