×
Ad

ಕೊಯಮತ್ತೂರು ಕಾರು ಸ್ಫೋಟ ಪ್ರಕರಣ: ತಮಿಳುನಾಡಿನ 40 ಕಡೆ ಏಕಕಾಲದಲ್ಲಿ ಎನ್ ಐಎ ದಾಳಿ

Update: 2023-02-15 12:27 IST

ಚೆನ್ನೈ: ಕೊಯಮತ್ತೂರಿನ ಕೈಗಾರಿಕಾ ಪ್ರದೇಶದಲ್ಲಿ 2020ರ ದೀಪಾವಳಿ ಸಂದರ್ಭ ಕಾರಿನಲ್ಲಿ ಸಂಭವಿಸಿದ್ದ ಸಿಲಿಂಡರ್ ಸ್ಪೋಟಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ(NIA) ಏಕಕಾಲದಲ್ಲಿ ತಮಿಳುನಾಡಿನ 40 ಸ್ಥಳಗಳಲ್ಲಿ ದಾಳಿ ನಡೆಸಿದೆ.

ಬುಧವಾರ ಬೆಳಗ್ಗಿನ ಜಾವ ಕೊಯಮತ್ತೂರಿನ 16 ಸ್ಥಳಗಳಲ್ಲದೆ, ತಿರುನಲ್ವೇಲಿ, ನಾಗಪಟ್ಟಣ ಮುಂತಾದ ಕಡೆ ದಾಳಿ ನಡೆದಿದೆ.

ಆರೋಪಿ ಜೊತೆಗಿನ  ನಂಟಿನ ಬಗ್ಗೆ ಮಾಹಿತಿ ಕಲೆ ಹಾಕಲು ಕೊಯಮತ್ತೂರಿನಲ್ಲಿಯೇ ಹೆಚ್ಚು ಶೋಧ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಅ.23, 2022ರಂದು ಕೊಯಮತ್ತೂರಿನ ಕೈಗಾರಿಕಾ ಪ್ರದೇಶದ ದೇವಸ್ಥಾನದಿಂದ ಕೆಲವೇ ಮೀಟರ್ ಗಳ ದೂರದಲ್ಲಿ ನಿಂತಿದ್ದ ಮಾರುತಿ 800 ಕಾರಿನಲ್ಲಿ ಸಿಲಿಂಡರ್ ಸ್ಫೋಟಗೊಂಡಿತ್ತು. ಘಟನೆಯಲ್ಲಿ  ಓರ್ವರು ಸಾವನ್ನಪ್ಪಿದ್ದರು.

Similar News