ಫ್ಯಾಕ್ಟ್‌ಚೆಕ್:‌ ಟರ್ಕಿ ಭೂಕಂಪನಕ್ಕೆ ಅಮೇರಿಕಾದ HAARP ಕಾರ್ಯಾಚಾರಣೆ ಕಾರಣವೇ?

Update: 2023-02-16 17:57 GMT

ಇಸ್ತಾನ್‌ಬುಲ್:‌ ಟರ್ಕಿಯಲ್ಲಿ ಇತ್ತೀಚಿಗೆ ನಡೆದ ಭೂಕಂಪನಕ್ಕೆ ಹೈ-ಫ್ರೀಕ್ವೆನ್ಸಿ ಆಕ್ಟಿವ್ ಅರೋರಲ್ ರಿಸರ್ಚ್ ಪ್ರೋಗ್ರಾಂ (HAARP) ಎಂಬ US ಮಿಲಿಟರಿ ಕಾರ್ಯಾಚರಣೆ ಕಾರಣವಲ್ಲ ಎಂದು ತಜ್ಞರು ತಿಳಿಸಿರುವುದಾಗಿ reuters.com ವರದಿ ಮಾಡಿದೆ. ಅಲ್ಲದೆ, HAARP ಭೂಕಂಪಗಳನ್ನು ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿಲ್ಲ ಎಂದು ತಜ್ಞರು ಹೇಳಿದ್ದಾರೆ.

ಟರ್ಕಿಯಲ್ಲಿ ನಡೆದ ಭೂಕಂಪನಕ್ಕೆ HAARP ಕಾರಣವೆಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿಪಾದಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸತ್ಯಾಂಶವನ್ನು ಕಂಡುಕೊಳ್ಳಲು ರಾಯ್ಟರ್ಸ್‌ ತಜ್ಞರ ಅಭಿಪ್ರಾಯವನ್ನು ಪಡೆದುಕೊಂಡು ವರದಿ ಮಾಡಿದೆ.   

  "ಟರ್ಕಿಯಲ್ಲಿನ ಭೂಕಂಪವು NATO/US ನಿಂದ ಟರ್ಕಿಯ ವಿರುದ್ಧ ದಂಡನಾತ್ಮಕ ಕಾರ್ಯಾಚರಣೆಯಂತೆ (HAARP) ತೋರುತ್ತಿದೆ" ಎಂದು ಪ್ರತಿಪಾದಿಸಿ ಟ್ವಿಟರ್‌ ಬಳಕೆದಾರರೊಬ್ಬರು ವೀಡಿಯೊ ಹಂಚಿಕೊಂಡಿದ್ದರು.

University of Alaska Fairbanks ನೀಡಿರುವ ಮಾಹಿತಿ ಪ್ರಕಾರ, “HAARP ಎನ್ನುವುದು (ionosphere) ಅಯಾನುಗೋಳದ ಗುಣಲಕ್ಷಣಗಳು ಮತ್ತು ನಡವಳಿಕೆಯನ್ನು ಅಧ್ಯಯನ ಮಾಡಲು ಉನ್ನತ-ಶಕ್ತಿ, ಹೆಚ್ಚಿನ ಆವರ್ತನ ಟ್ರಾನ್ಸ್‌ಮಿಟರ್ ಅನ್ನು ಬಳಸುವ ಒಂದು ಪ್ರೋಗ್ರಾಂ ಆಗಿದೆ.” (ಅಯಾನುಗೋಳವು ಭೂಮಿಯ ಮೇಲ್ಮೈಯಿಂದ ಸರಿಸುಮಾರು 50 ರಿಂದ 400 ಮೈಲುಗಳಷ್ಟು ದೂರದಲ್ಲಿ, ಬಾಹ್ಯಾಕಾಶದ ಅಂಚಿನವರೆಗೂ ವ್ಯಾಪಿಸಿದೆ)

ಟರ್ಕಿಯಲ್ಲಿ ಅಥವಾ ಎಲ್ಲಿಯೂ ಭೂಕಂಪಕ್ಕೆ HAARP ಜವಾಬ್ದಾರನಾಗಿರುವುದಿಲ್ಲ, ಏಕೆಂದರೆ ಅದು ಅಂತಹ ಸಾಮರ್ಥ್ಯಗಳನ್ನು ಹೊಂದಿಲ್ಲ ಎಂದು ಹಲವು ತಜ್ಞರು ರಾಯಿಟರ್ಸ್ ಗೆ ತಿಳಿಸಿದ್ದಾರೆ.

Full View

Similar News