ಎಫ್ಬಿಐ ಕಂಪ್ಯೂಟರ್ ನೆಟ್ವರ್ಕ್ ಹ್ಯಾಕ್: ವರದಿ
Update: 2023-02-17 22:03 IST
ನ್ಯೂಯಾರ್ಕ್, ಫೆ.17: ಎಫ್ಬಿಐ(ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಷನ್)ನ ನ್ಯೂಯಾರ್ಕ್ ಕಚೇರಿಯ ಕಂಪ್ಯೂಟರ್ ನೆಟ್ವರ್ಕ್ ಅನ್ನು ಹ್ಯಾಕ್ ಮಾಡಲಾಗಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ಸಿಎನ್ಎನ್ ವರದಿ ಮಾಡಿದೆ.
ಎಫ್ಬಿಐ(FBI)ಗೆ ಈ ಘಟನೆಯ ಬಗ್ಗೆ ತಿಳಿದಿದೆ ಮತ್ತು ಹೆಚ್ಚುವರಿ ಮಾಹಿತಿಯನ್ನು ಪಡೆಯಲು ಕೆಲಸ ಮಾಡುತ್ತಿದೆ. ಈಗ ಹ್ಯಾಕ್ ಆಗಿರುವ ನೆಟ್ವರ್ಕ್ ಅನ್ನು ಪ್ರತ್ಯೇಕಿಸಲಾಗಿದ್ದು ದುರುದ್ದೇಶಪೂರಿತ ಸೈಬರ್ ಚಟುವಟಿಕೆಯ ತನಿಖೆ ನಡೆಯುತ್ತಿದೆ ಎಂದು ಎಫ್ಬಿಐಯ ಹೇಳಿಕೆ ತಿಳಿಸಿದೆ. ಯಾವ ಮಾಹಿತಿಯನ್ನು ಹ್ಯಾಕ್ ಮಾಡುವ ಪ್ರಯತ್ನ ನಡೆದಿದೆ ಎಂಬ ಬಗ್ಗೆ ಹೆಚ್ಚಿನ ವಿವರವನ್ನು ಎಫ್ಬಿಐ ಅಧಿಕಾರಿಗಳು ನೀಡಿಲ್ಲ ಎಂದು ವರದಿ ಹೇಳಿದೆ.